ಬೆಂಗಳೂರು: ಇಂಡಿಯನ್ ಎಕ್ಸ್ ಪ್ರೆಸ್ ಆಂಗ್ಲ ದಿನಪತ್ರಿಕೆಯ ದೆಹಲಿ ಅವೃತಿಯಲ್ಲಿ ನಿನ್ನೆ(ಸೋಮವಾರ, ಜುಲೈ 19) ಪ್ರಕಟವಾಗಿರುವ ಜಾಹೀರಾತಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರ ಪ್ರಕಟವಾಗದಿರುವುದು ಜಾಹೀರಾತು ಏಜೆನ್ಸಿಯಿಂದ ಆಗಿರುವ ಪ್ರಮಾದವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿಎಂ ಬದಲಾಯಿಸಿ ನೋಡೋಣ! : ಬಿಜೆಪಿ ಹೈಕಮಾಂಡ್ ಗೆ ಮಠಾಧೀಶರ ವಾರ್ನಿಂಗ್
ಕೇಂದ್ರ ಸರ್ಕಾರವು ನೂತನವಾಗಿ ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಆರಂಭಿಸಿರುವುದಕ್ಕೆ ಬಿರೇಶ್ವರ ಕೊ ಆಪರೇಟಿವ್ ಸೊಸೈಟಿ ಲಿ. ನವರು ಜಾಹೀರಾತು ನೀಡಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರು ನಮ್ಮ ನೆಚ್ಚಿನ ನಾಯಕರಾಗಿದ್ದು, ಅವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಹೊಂದಿದವಳಾಗಿದ್ದೇನೆ ಎಂದಿದ್ದಾರೆ.
ಜಾಹಿರಾತಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಭಾವಚಿತ್ರ ಪ್ರಕಟಿಸದಿರುವುದು ನನಗೂ ವಯಕ್ತಿಕವಾಗಿ ಬೇಸರ ತರಿಸಿದೆ.
ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದು ಬೇಡ ಎಂದು ವಿನಂತಿಸಿಕೊಳ್ಳುತ್ತೇನೆ. ಇನ್ನು ಮುಂದೆ ಈ ರೀತಿಯ ಅಚಾತುರ್ಯ ನಡೆಯದಂತೆ ಕ್ರಮ ವಹಿಸಲು ಸಂಬಂಧ ಪಟ್ಟವರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ : ಹೊರನಾಡಿನಲ್ಲಿ ಕನ್ನಡದ ಡಿಂಡಿಮ ಬಾರಿಸುತ್ತಿರುವ “ಕನ್ನಡ ಪಾಠ ಶಾಲೆ ದುಬೈ”