ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಶರ್ವಾನಂದ್ – ರಕ್ಷಿತಾ ರೆಡ್ಡಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಜೂ.3 ರಂದು ಕುಟುಂಬದವರ ಸಮ್ಮುಖದಲ್ಲಿ ಶರ್ವಾನಂದ್ ವಿವಾಹವಾಗಿದ್ದಾರೆ.
ನಟರಾದ ರಾಮ್ ಚರಣ್, ಸಿದ್ಧಾರ್ಥ್, ನಿರ್ಮಾಪಕ ವಂಶಿ, ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯರು ಮದುವೆಯಲ್ಲಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದ್ದಾರೆ. ಮದುವೆ ಫೋಟೋಸ್ ಹೊರಬಿದ್ದಿದ್ದು, ಟಾಲಿವುಡ್ ವಲಯದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಹೊಸ ಇನ್ನಿಂಗ್ಸ್ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್
2023ರ ಜನವರಿ 26 ರಂದು ಟಾಲಿವುಡ್ ನಟ ಶರ್ವಾನಂದ್, ಯುಎಸ್ ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿರುವ ಆಂಧ್ರ ಮೂಲದ ರಕ್ಷಿತಾ ರೆಡ್ಡಿ ಅವರೊಂದಿಗೆ ಎಂಗೇಜ್ ಮೆಂಟ್ ಆಗಿರುವ ಫೋಟೋವನ್ನು ಹಂಚಿಕೊಂಡಿದ್ದರು.
Related Articles
ಇತ್ತೀಚೆಗೆ ನಟ ಶರ್ವಾನಂದ್ ಅವರ ಮದುವೆ ರದ್ದಾಗಿದೆ. ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದೆ ಅವರ ಕಾರು ಅಪಘಾತಗೊಂಡಿತ್ತು.
ಸದ್ಯ ಶರ್ವಾನಂದ್ ತಮ್ಮ 35 ನೇ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸುತ್ತಿದ್ದಾರೆ.