Advertisement

“ನನ್ನ ಪುತ್ರ ಡ್ರಗ್ಸ್​ ಸೇವಿಸಲಿ” ಎಂದಿದ್ದ ಶಾರುಖ್ ಖಾನ್ : ಹಳೆಯ ವಿಡಿಯೋ ವೈರಲ್

02:28 PM Oct 04, 2021 | Team Udayavani |

ಮುಂಬೈ: ಆರ್ಯನ್ ಖಾನ್ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಬೆನ್ನಲ್ಲೆ ಅವರ ತಂದೆ ಶಾರುಖ್ ಅವರು ಮಾತನಾಡಿದ್ದ ಹಳೆಯ ವಿಡಿಯೋ ಮುನ್ನೆಲೆಗೆ ಬಂದಿದೆ. ಈ ವಿಡಿಯೋದಲ್ಲಿ “ನನ್ನ ಮಗ ಡ್ರಗ್ಸ್ ಸೇವನೆ ಮಾಡಲಿ” ಎಂದು ಶಾರುಖ್ ಹೇಳಿದ್ದಾರೆ.

Advertisement

ಶನಿವಾರ ರಾತ್ರಿ ಖಾಸಗಿ ಕ್ರೂಸ್ ನಲ್ಲಿ ನಡೆದ ಡ್ರಗ್ಸ್ ಪಾರ್ಟಿಯಲ್ಲಿ ಪಾಲ್ಗೊಂಡ ಆರೋಪದ ಮೇರೆಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಎನ್ ಸಿಬಿ ಬಂಧಿಸಿದ್ದಾರೆ. ಈ ಘಟನೆಯ ಕುರಿತು ಭಾರೀ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೆ ತನ್ನ ಪುತ್ರನ ಬಗ್ಗೆ ಶಾರುಖ್ ಹೇಳಿದ್ದ ಮಾತುಗಳ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.

ಸಂದರ್ಶನವೊಂದರಲ್ಲಿ ಪತ್ನಿ ಗೌರಿ ಖಾನ್ ಸಮೇತ ಪಾಲ್ಗೊಂಡಿದ್ದ ಶಾರುಖ್ ಖಾನ್ ತಮ್ಮ ಪುತ್ರನ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ್ದಾರೆ. ‘ತಮ್ಮ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​ ಸೇವಿಸಲಿ, ಮನಬಂದಷ್ಟು ಸಿಗರೇಟ್​ ಸೇದಲಿ, ಬೇಕಾದರೆ ಹುಡುಗಿಯರ ಹಿಂದೆಯೂ ಹೋಗಲಿ. ನಾನು ಏನೆಲ್ಲ ಮಾಡಿಲ್ಲವೋ ಅದನ್ನೆಲ್ಲ ಆರ್ಯನ್​ ಮಾಡಬಹುದು. ಚಿಕ್ಕವಯಸ್ಸಿನಲ್ಲೇ ಶುರುಮಾಡಲಿ. ಲೈಫ್​ ಎಂಜಾಯ್​ ಮಾಡಲಿ ಹೇಳಿದ್ದರು. ಈ ಸಂದರ್ಭದಲ್ಲಿ ಮಗನ ವಯಸ್ಸು 3 ವರ್ಷ ಎಂದೂ ಶಾರುಖ್ ಹೇಳಿದ್ದರು. ಪಕ್ಕದಲ್ಲೇ ಇದ್ದ ಗೌರಿಖಾನ್ ನಗುತ್ತಾ ಇಲ್ಲ.. 2 ವರ್ಷ ವಯಸ್ಸು ಎಂದು ಹೇಳುತ್ತಾರೆ.

1997ರಲ್ಲಿ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ಜೊತೆಯಾಗಿ ನೀಡಿದ್ದ ಸಂದರ್ಶನ ಇದಾಗಿದ್ದು, ಶಾರುಖ್ ಅವರ ಈ ಹಳೆಯ ಹೇಳಿಕೆ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿರುವ ಶಾರುಖ್ ಮಾತುಗಳಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದು ಶಾರುಖ್ ಖಾನ್ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ ನೆಟ್ಟಿಗರು.

Advertisement
Advertisement

Udayavani is now on Telegram. Click here to join our channel and stay updated with the latest news.

Next