ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಸಮರ ಯಾವುದೇ ತಾರ್ಕಿಕ ಅಂತ್ಯ ಕಾಣದೆ ಉಲ್ಬಣಿಸುತ್ತಿರುವ ಕಾರಣ ಇದರ ತಾಪಕ್ಕೆ ನಲುಗುತ್ತಿರುವ ಜಾಗತಿಕ ಶೇರು ಪೇಟೆಗಳನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಕೂಡ ತತ್ತರಿಸಿದ್ದು ಇಂದು ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ದಿನಾಂತ್ಯಕ್ಕೆ 372 ಅಂಕಗಳ ನಷ್ಟ ಅನುಭವಿಸಿ 37,090.82 ಅಂಕಗಳ ಮಟ್ಟಕ್ಕೆ ಕುಸಿಯಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 130.70 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 11,148.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಪಿಎಸ್‌ಯು ಬ್ಯಾಂಕುಗಳು ಮುತ ಫಾರ್ಮಾ ರಂಗದ ಶೇರುಗಳು ವಿಪರೀತ ಮಾರಾಟ ಒತ್ತಡವನ್ನು ಕಂಡು ಶೇ 4ರಷ್ಟು ಕುಸಿದವು.
ಇಂದಿನ ಟಾಪ್ ಲೂಸರ್‌ಗಳು : ಈಶರ್ ಮೋಟರ್, ಝೀ ಎಂಟರ್‌ಟೇನ್‌ಮೆಂಟ್, ಸನ್ ಫಾರ್ಮಾ, ಇಂಡಿಯಾ ಬುಲ್ಸ್ ಹೌಸಿಂಗ್, ಎಸ್ ಬ್ಯಾಂಕ್; ಟಾಪ್ ಲೂಸರ್‌ಗಳು : ಟೈಟಾನ್ ಕಂಪೆನಿ, ಭಾರ್ತಿ ಇನ್‌ಫ್ರಾಟೆಲ್, ಟೆಕ್ ಮಹೀಂದ್ರ, ಎಚ್ ಡಿ ಎಫ್ ಸಿ, ಎಚ್‌ಯುಎಲ್.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,644 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 621 ಶೇರುಗಳು ಮುನ್ನಡೆ ಸಾಧಿಸಿದವು; 1.840 ಶೇರುಗಳು ಹಿನ್ನಡೆಗೆ ಗುರಿಯಾದವು; 183 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.