ಹೊಸದಿಲ್ಲಿ: ಶಾಲೆಗಳಲ್ಲಿ ಹೆಣ್ಣುಮಕ್ಕಳನ್ನು ಕಿಚಾಯಿಸುವ ಘಟನೆಗಳನ್ನು ತಡೆಯುವ ಸಲುವಾಗಿ ಗುರುಗ್ರಾಮದ 13ರ ಬಾಲಕಿ ಅನುಷ್ಕಾ ಇಟ್ಟ ಹೆಜ್ಜೆ ಇದೀಗ ದೇಶದ ಯುವಜನತೆಗೆ ಸ್ಫೂರ್ತಿಯಾಗಿದೆ.
ಶಾಲೆಯ ಶಿಕ್ಷಕರು, ಪೋಷಕರ ಸಹಾಯದಿಂದ “ಕವಚ್’ ಹೆಸರಿನ ಆ್ಯಪ್ ಒಂದನ್ನು ತಯಾರಿಸಿದ್ದಾಳೆ.
ಅನುಷ್ಕಾ ಇತ್ತೀಚೆಗೆ “ಶಾರ್ಕ್ ಟ್ಯಾಂಕ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಈ ಆ್ಯಪ್ ಸ್ಟಾರ್ಟ್‌ಅಪ್ ಬಗ್ಗೆ ಕೇಳಿ ಉತ್ಸುಕರಾದ ಉದ್ಯಮಿಗಳು 50 ಲಕ್ಷ ರೂಪಾಯಿಯನ್ನು “ಕವಚ್’ಗೆ ಹೂಡಿಕೆ ಮಾಡಿದ್ದಾರೆ. ಉದ್ಯಮಿಗಳಾದ ಅನುಪಮ್ ಮಿತ್ತಲ್ ಮತ್ತು ಅಮನ್ ಗುಪ್ತಾ ಹೂಡಿಕೆ ಮಾಡಿದ್ದಾರೆ.
ಅಪಹಾಸ್ಯ ನಡೆಯುತ್ತಿರುವುದನ್ನು ಯಾರಾದರೂ ಕಂಡರೆ ತತ್‌ಕ್ಷಣ “ಕವಚ್’ ಆ್ಯಪ್‌ನಲ್ಲಿ ರಿಪೋರ್ಟ್ ಮಾಡಬಹುದು. ಶೈಕ್ಷಣಿಕ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು ಜಂಟಿಯಾಗಿ ಹಾಗೂ ತಜ್ಞರು ಜಂಟಿಯಾಗಿ ರೂಪಿಸಿರುವ ಆ್ಯಂಟಿ ಬುಲ್ಲಿಯಿಂಗ್ ಸ್ಕ್ವಾಡ್‌ಗೆ (ಎಬಿಎಸ್) ಇದರ ದೂರಿನ ಪ್ರತಿ ಸೇರುತ್ತದೆ. ಅದರ ಆಧಾರದಲ್ಲಿ ಸ್ಕ್ವಾಡ್ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತದೆ. ಈವರೆಗೆ 2 ಸಾವಿರ ವಿದ್ಯಾರ್ಥಿಗಳಿಗೆ ಇದು ನೆರವಾಗಿದೆ ಎಂದು ಅನುಷ್ಕಾ ತನ್ನ ಆ್ಯಪ್ ಬಗ್ಗೆ ವಿವರಣೆ ನೀಡಿದ್ದಾಳೆ.