Advertisement

ಆಯಸ್ಕಾಂತೀಯ ವಲಯಗಳಲ್ಲಿ ಸಂಚರಿಸುತ್ತವೆ ಶಾರ್ಕ್ ಮೀನುಗಳು..!

05:00 PM May 11, 2021 | Team Udayavani |

ಮೂಳೆ ಇರದೇ ಮಾಂಸದಿಂದಲೇ ಕೂಡಿರುವ ಶಾರ್ಕ್‍ ಮೀನುಗಳು ಸಮುದ್ರದಲ್ಲಿರುವ ಚಿಕ್ಕ ಪುಟ್ಟ ಮೀನುಗಳನ್ನು, ಪ್ರಾಣಿಗಳನ್ನು ತಿಂದು ಬದುಕುತ್ತವೆ. ಬೃಹತ್ ದೇಹ ಗಾತ್ರ ಹೊಂದಿರುವ ಶಾರ್ಕ್ ಮೀನುಗಳು ಕಾಂಡ್ರಿಕೀಸ್ ವರ್ಗಕ್ಕೆ ಸೇರಿದ ಕಾರ್ಟಿಲೇಜಿನಸ್ ಮೀನುಗಳು.

Advertisement

ಅತಿ ಮೊನಚಾದ ಹಲ್ಲುಗಳೇ ಇವುಗಳ ರಕ್ಷಣಾ ಅಸ್ತ್ರವಾಗಿದ್ದು, ಕನಿಷ್ಠ 50 ಹಲ್ಲುಗಳಿಂದ ಕೂಡಿರುತ್ತವೆ., ರೇ ಶಾರ್ಕ್ ಮತ್ತು ಸ್ಕೇಟ್ ಶಾರ್ಕ್ ಗಳೆಂಬ ಎರಡು ವಿಧಗಳು ಈ ಮೀನಿನಲ್ಲಿವೆ.

ಶಾರ್ಕ್‍ಗಳು ಸಮುದ್ರದಲ್ಲಿ ಸಂಚರಿಸಲು ಅಯಸ್ಕಾಂತೀಯ ವಲಯಗಳನ್ನು ಬಳಸುತ್ತದೆ ಎಂದು ಊಹೆಯ ಒಂದು ಅಭಿಪ್ರಾಯ. ಇದೀಗ ಈ ಊಹೆಗೆ ಪ್ರಮಾಣೀಕೃತವಾಗಿ ಎಲೆಕ್ಟ್ರೋ ಅಯಸ್ಕಾಂತೀಯ ವಲಯ ಮತ್ತು ಸಮುದ್ರ ವಾಸಿಗಳ ನಡುವೆ ಇರುವ ಸಂಬಂಧವನ್ನು ಸಾಕ್ಷ್ಯಾಧಾರಗಳ ಮೂಲಕ ಪತ್ತೆ ಮಾಡಲಾಗಿದೆ.

ಶಾರ್ಕ್‍ಗಳಿಗೆ ಭೂಮಿಯ ಪ್ರತಿ ವಲಯಗಳ ಬಗ್ಗೆ ಅರಿಯುವ ಸಾಮರ್ಥ್ಯ ಇದೆ ಮತ್ತು ಈ ಅರಿವನ್ನು ಸಮುದ್ರದಾದ್ಯಂತ ಬಹುದೂರ ಸಂಚರಿಸಲು ಬಳಸಿಕೊಳ್ಳುತ್ತವೆ ಎಂದು ಕರೆಂಟ್ ಬಯಾಲಜಿ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವರದಿ ತಿಳಿಸಿತ್ತು.

ಫ್ಲೋರಿಡಾ ರಾಜ್ಯ ವಿಶ್ವವಿದ್ಯಾಲಯ ಕರಾವಳಿ ಮತ್ತು ಸಮುದ್ರ ಪ್ರಯೋಗಾಲಯದಲ್ಲಿ ಪಿಎಚ್‍ಡಿ ಪದವೀಧರ ಹಾಗೂ ಸೇವ್​ ಅವರ್​ ಸೀ (ನಮ್ಮ ಸಮುದ್ರ ರಕ್ಷಿಸಿ) ಎಂಬ ಫೌಂಡೇಶನ್‍ನ ಪ್ರಾಜೆಕ್ಟ್ ನಾಯಕರಾದ ಬ್ರ್ಯಾನ್ ಕೆಲ್ಲರ್ ಸಂಶೋಧನೆ ಕೈಗೊಂಡಿದ್ದು, ಫೋರ್ಬ್ಸ್ ನಿಯತಕಾಲಿಕೆಗೆ ನೀಡಿರುವ ಮಾಹಿತಿ ಪ್ರಕಾರ, ವಿಶಿಷ್ಟ ಭೂಕಾಂತೀಯ ಲಕ್ಷಣಗಳಿಗೆ ಪ್ರತಿಕ್ರಿಯಿಸಲು ಶಾರ್ಕ್‌ಗಳಿಗೆ ತರಬೇತಿ ನೀಡಲಾಗುತ್ತದೆ, ಆದ್ದರಿಂದ, ಕಾಂತಕ್ಷೇತ್ರದಲ್ಲಿನ ವ್ಯತ್ಯಾಸವನ್ನು ಪತ್ತೆಹಚ್ಚುತ್ತವೆ ಮತ್ತು ಪ್ರತಿಕ್ರಿಯಿಸುತ್ತವೆ ಎಂದು ಹೇಳಿದ್ದಾರೆ.

Advertisement

ಶಾರ್ಕ್‍ಗಳಲ್ಲಿ ನಿಗೂಢ ಕಾಂತೀಯ ಪ್ರಜ್ಞೆ ಇರುತ್ತದೆ ಎಂಬ ಊಹೆಯ ಹೊರತಾಗಿಯೂ, ಶಾರ್ಕ್‍ಗಳು ಇತರ ಪಕ್ಷಿಗಳು, ಸಮುದ್ರ ಆಮೆಗಳು, ಸ್ಥಳದ ಬಗ್ಗೆ ಅರಿವು ಹೊಂದಿರುತ್ತವೆಯೇ ಎಂಬ ಅವುಗಳ ವರ್ತನೆಯ ಬಗ್ಗೆ ವಿಜ್ಞಾನಿಗಳನ್ನು ಪ್ರಶ್ನೆಗಳನ್ನು ಕೇಳಿದರು.

2005 ರಲ್ಲಿ, ವಿಜ್ಞಾನಿಗಳು ದಕ್ಷಿಣ ಆಫ್ರಿಕಾದಿಂದ ಆಸ್ಟ್ರೇಲಿಯಕ್ಕೆ ಹಿಂದಕ್ಕೆ ಮತ್ತು ಮುಂದಕ್ಕೆ ಬಿಳಿ ಶಾರ್ಕ್ ಈಜುವುದನ್ನು ಗಮನಿಸಿದ್ದರು, ಅವರು ಕಾಂತೀಯ ಕ್ಷೇತ್ರಗಳನ್ನು ಪತ್ತೆ ಮಾಡಬಹುದೆಂದು ಭಾವಿಸಿದ್ದರು. ಈ ಅಧ್ಯಯನವನ್ನೇ ಮುಂದುವರೆಸಿದ ಕೆಲ್ಲರ್ ಹಾಗೂ ಆತನ ಸಹೋದ್ಯೋಗಿಗಳು ಶಾರ್ಕ್ ತುಂಬಾ ದೂರದ ಸಂಚರಿಸುವ ವಿಷಯದ ಕುರಿತಾಗಿ ಇನ್ನಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದರು.

ಈ ತೀರ್ಮಾನಕ್ಕೆ ಬರುವ ಮೊದಲು 20 ಜುವೇನೈಲ್ ಬೊನ್ನೆತ್‍ಹೆಡ್ ಶಾರ್ಕ್‍ಗಳನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು. ಈ ವೇಳೆ ನೂರಾರು ಕಿಲೋಮೀಟರ್ ದೂರದಲ್ಲಿರುವ ಸ್ಥಳಗಳಿಂದ ವಿಭಿನ್ನ ಕಾಂತೀಯ ಕ್ಷೇತ್ರಗಳಿಗೆ ಒಳಪಡಿಸುವ ಮೂಲಕ ಪರೀಕ್ಷಿಸಿದರು.

ಅಂದರೆ ಅವುಗಳಿರುವ ಪ್ರದೇಶದಿಂದ ಸುಮಾರು 600 ಕಿ.ಮೀ ದಕ್ಷಿಣ ಮತ್ತು 600 ಕಿ.ಮೀ ಉತ್ತರ ದೂರವಿರುವ ಪ್ರದೇಶದಲ್ಲಿ ಅವುಗಳನ್ನು ಇರಿಸಿ ಅವು ಹೇಗೆ ತನ್ನ ಪ್ರದೇಶಕ್ಕೆ ಕ್ರಮಿಸುತ್ತದೆ ಎಂದು ತಿಳಿಯಲಾಯಿತು. ಅಂದರೆ ಇವುಗಳಿಗೆ ಪ್ರತಿ ಬಾರಿಯೂ ಅಲ್ಲಿಯೇ ತಿರುಗಿ ಗೊತ್ತಿರುವುದರಿಂದ ಅವುಗಳಿಗೆ ತಾವು ವಾಸಿಸುವ ಸ್ಥಳದ ಅರಿವಿರುತ್ತದೆ. ಹಾಗಾಗಿ ಎಷ್ಟೇ ದೂರವಿದ್ದರೂ ಸುಲಭವಾಗಿ ಸಂಚರಿಸುತ್ತದೆ ಎಂದು ತಿಳಿಯಿತು ಎಂದು ಹೇಳಿದ್ದಾರೆ.

ಅಲ್ಲದೇ ನಾನು ಬೊನ್ನೆತ್‍ಹೆಡ್ ಎಂಬ ಶಾರ್ಕ್ ಮೇಲೆ ಪ್ರಯೋಗ ಮಾಡಿದೆ. ಬೇರೆ ಶಾರ್ಕ್‍ಗಳ ಮೇಲೂ ಸಂಶೋಧನೆ ನಡೆಸಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next