ಮುಂಬಯಿ:ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಮಂದಗತಿಯ ವಹಿವಾಟಿನ ಪರಿಣಾಮ ಮಂಗಳವಾರ(ಸೆಪ್ಟೆಂಬರ್ 28) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 410.28 ಅಂಕಗಳ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ.
ಇದನ್ನೂ ಓದಿ:ಪರಿಸರ ಪ್ರೇಮಿಗಳಿಗೆ ಮಾದರಿ…ವೃಕ್ಷದಲ್ಲೊಂದು ಮನೆಯ ಮಾಡಿ…
ಬಾಂಬೆ ಷೇರುಪೇಟೆಯ ಮಧ್ಯಾಹ್ನದ ವಹಿವಾಟಿನ ವೇಳೆ ಸಂವೇದಿ ಸೂಚ್ಯಂಕ 1,032.35ಅಂಕ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ನಂತರ ಸಂವೇದಿ ಸೂಚ್ಯಂಕ 410.28 ಅಂಕ ಇಳಿಕೆಯಾಗಿದ್ದು, 59,667.60 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಎನ್ ಎಸ್ ಇ ನಿಫ್ಟಿ 106.50 ಅಂಕ ಇಳಿಕೆಯಾಗಿದ್ದು, 17,748.60 ಅಂಕಗಳ ಗಡಿ ತಲುಪಿದೆ. ಸೆನ್ಸೆಕ್ಸ್ ಇಳಿಕೆಯಿಂದ ಭಾರ್ತಿ ಏರ್ ಟೆಲ್, ಟೆಕ್ ಮಹೀಂದ್ರ, ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಎಚ್ ಸಿಎಲ್ ಟೆಕ್ ಮತ್ತು ಇನ್ಫೋಸಿಸ್ ಷೇರುಗಳು ನಷ್ಟ ಕಂಡಿದೆ.
ಪವರ್ ಗ್ರಿಡ್, ಎನ್ ಟಿಪಿಸಿ, ಸನ್ ಫಾರ್ಮಾ, ಟೈಟಾನ್, ಕೋಟಕ್ ಬ್ಯಾಂಕ್ ಮತ್ತು ಡಾ.ರೆಡ್ಡಿ ಷೇರುಗಳು ಲಾಭಗಳಿಸಿದೆ. ಜಾಗತಿಕ ಷೇರು ಮಾರುಕಟ್ಟೆಯ ಧನಾತ್ಮಕ ಸೂಚನೆಯ ಪರಿಣಾಮ ಐಟಿ ಮತ್ತು ರಿಯಲ್ಟಿ ಸೆಕ್ಟರ್ಸ್ ಷೇರುಗಳ ಲಾಭಾಂಶವನ್ನು ಹೆಚ್ಚಾಗಿ ಕಾಯ್ದರಿಸಿದ್ದರಿಂದ ಸೆನ್ಸೆಕ್ಸ್ ಕುಸಿತಕ್ಕೆ ಕಾರಣವಾಗಿತ್ತು.