Advertisement

 Repo Rate ಎಫೆಕ್ಟ್:‌ ಬಾಂಬೆ ಷೇರುಪೇಟೆ ಸೂಚ್ಯಂಕ 1,300ಕ್ಕೂ ಅಧಿಕ ಅಂಕ ಜಿಗಿತ

12:35 PM Jun 07, 2024 | |

ಮುಂಬೈ: ಆರ್‌ ಬಿಐ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧಾರ ಕೈಗೊಂಡಿರುವುದಾಗಿ ಘೋಷಿಸಿದ ಬೆನ್ನಲ್ಲೇ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಬರೋಬ್ಬರಿ 1,000ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ವಹಿವಾಟು ಮುಂದುವರಿದಿದೆ.

Advertisement

ಇದನ್ನೂ ಓದಿ:Karnatakaದಲ್ಲಿ “ಹಮಾರೆ ಬಾರಾಹ್”‌ ಸಿನಿಮಾ ಬಿಡುಗಡೆಗೆ ನಿಷೇಧ, ಮಹಾರಾಷ್ಟ್ರದಲ್ಲಿ ರಿಲೀಸ್

ಲೋಕಸಭೆ ಚುನಾವಣ ಫಲಿತಾಂಶ ಪ್ರಕಟವಾದ ನಂತರದ ಮೂರು ದಿನಗಳ ಕಾಲ ಷೇರುಪೇಟೆ ಸೂಚ್ಯಂಕ ಏರುಗತಿಯಲ್ಲಿ ಸಾಗುತ್ತಿದ್ದು, ಶುಕ್ರವಾರ (ಜೂನ್‌ 07) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 1,382 ಅಂಕಗಳ ಏರಿಕೆಯೊಂದಿಗೆ 76,458.57 ಅಂಕಗಳ ದಾಖಲೆ ಮಟ್ಟದ ಗಡಿ ತಲುಪಿದೆ.

ಎಸ್‌ ಬಿಐ ಲೈಫ್‌, ಬಜಾಜ್‌ ಆಟೋ, ಟಾಟಾ ಕನ್ಸೂಮರ್‌ ಪ್ರಾಡಕ್ಟ್‌, ಬ್ರಿಟಾನಿಯಾ ಇಂಡಸ್ಟ್ರೀಸ್‌, ವಿಪ್ರೋ, ಇನ್ಫೋಸಿಸ್‌, ಟೆಕ್‌ ಮಹೀಂದ್ರಾ, ಬಜಾಜ್‌ ಫೈನಾನ್ಸ್‌ ಷೇರುಗಳು ಲಾಭಗಳಿಸಿದೆ.

ಬಾಂಬೆ ಷೇರುಪೇಟೆಯಲ್ಲಿ 12 ಗಂಟೆಯ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1,337.21 ಅಂಕ ಏರಿಕೆಯಾಗಿದ್ದು, ಎನ್‌ ಎಸ್‌ ಇ ನಿಫ್ಟಿ ಕೂಡಾ 354.20 ಅಂಕಗಳ ಜಿಗಿತದೊಂದಿಗೆ 23,175.60 ಅಂಕಗಳ ಗಡಿ ಮುಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next