ಮುಂಬಯಿ: ಬಾಂಬೆ ಷೇರುಪೇಟೆಯಲ್ಲಿ ದಾಖಲೆ ಮಟ್ಟದಲ್ಲಿ ಸೂಚ್ಯಂಕ ಏರಿಳಿತದ ವಹಿವಾಟು ನಡೆಸಿದ್ದು, ಅಂತಿಮವಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟದ ವಹಿವಾಟನ್ನು ಕೊನೆಗೊಳಿಸಿದೆ.
ಇದನ್ನೂ ಓದಿ:ಭಾರತದಲ್ಲಿ ಮಂದಿರ, ಮಸೀದಿ ಕಟ್ಟುವ ಸ್ವಾತಂತ್ರ್ಯವಿದೆ, ಜಗತ್ತಿನ ಹಲವೆಡೆ ಅಸಾಧ್ಯ: ಮಿಶ್ರಾ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 148.53 ಅಂಕಗಳಷ್ಟು ಏರಿಕೆಯಾಗಿದ್ದು, ದಾಖಲೆಯ 60,284.31 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟನ್ನು ಅಂತ್ಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 46.00 ಅಂಕ ಏರಿಕೆಯೊಂದಿಗೆ 17,992.00ರ ಗಡಿ ಮುಟ್ಟಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆಯ ಪರಿಣಾಮ ಬಜಾಜ್ ಆಟೋ, ಬಜಾಜ್ ಫಿನ್ ಸರ್ವ್, ಎಸ್ ಬಿಐ, ಹಿಂಡಲ್ಕೋ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಎಚ್ ಸಿಎಲ್ ಟೆಕ್ನಾಲಜೀಸ್, ಎಚ್ ಡಿಎಫ್ ಸಿ ಲೈಫ್, ಟೆಕ್ ಮಹೀಂದ್ರ ಮತ್ತು ಶ್ರೀ ಸಿಮೆಂಟ್ ಷೇರುಗಳು ನಷ್ಟ ಕಂಡಿದೆ.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಹಾಗೂ ಆಟೋ ಷೇರುಗಳಿಗೆ ಹೆಚ್ಚಿನ ಬೇಡಿಕೆ ಇದ್ದಿತ್ತು. ಐಟಿ ವಲಯದ ಷೇರುಗಳ ಲಾಭಾಂಶವನ್ನು ಹೂಡಿಕೆದಾರರು ಕಾಯ್ದಿರಿಸಿದ್ದ ಪರಿಣಾಮ ಸೆನ್ಸೆಕ್ಸ್ ಏರಿಳಿತದ ವಹಿವಾಟಿಗೆ ಸಾಕ್ಷಿಯಾಗಿತ್ತು.