Advertisement

ಮುಂಬೈ ಶೇರು ಮಾರುಕಟ್ಟೆ: ಒಂದು ಸಾವಿರ ಅಂಕ ಮಹಾಕುಸಿತ; ಹೂಡಿಕೆದಾರರಿಗೆ 2.7 ಲಕ್ಷ ಕೋಟಿ ನಷ್ಟ

12:07 PM Nov 03, 2015 | Nagendra Trasi |

ಮುಂಬೈ: ಐಟಿ ಮತ್ತು ಫೈನಾಶ್ಶಿಯಲ್ ಶೇರು ಮಾರಾಟ ತೀವ್ರ ಕಡಿಮೆ ವಹಿವಾಟು ನಡೆಸಿದ ಪರಿಣಾಮ ಗುರುವಾರ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 1,0,66.33 ಅಂಕಗಳಷ್ಟು ಮಹಾಕುಸಿತ ಕಂಡಿದ್ದು, 39, 728.41 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿದೆ.

Advertisement

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 290.70ಅಂಕಗಳಷ್ಟು ಕುಸಿತ ಕಂಡಿದ್ದು, 11,680.35 ಅಂಕಗಳ ವಹಿವಾಟಿನೊಂದಿಗೆ ಮುಕ್ತಾಯ ಕಂಡಿದೆ. ಒಂದು ಸಾವಿರ ಅಂಕಗಳ ಕುಸಿತದಿಂದ ಕಳೆದ ಹತ್ತು ದಿನಗಳಲ್ಲಿ ಮಾಡಿಕೊಂಡಿದ್ದ ಲಾಭ ಕೊಚ್ಚಿಕೊಂಡು ಹೋದಂತಾಗಿದೆ. ಒಂದೇ ದಿನದಲ್ಲಿ ಹೂಡಿಕೆದಾರರಿಗೆ 2.7 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.

ಸೆನ್ಸೆಕ್ಸ್ ಕುಸಿತಕ್ಕೆ ಮೂರು ಕಾರಣ:

ಸದ್ಯದ ಸ್ಥಿತಿಯಲ್ಲಿ ಅಮೆರಿಕ ವಿಶ್ವ ಆರ್ಥಿಕ ನೀತಿಯನ್ನು ಮುನ್ನಡೆಸುವ ಮುಂಚೂಣಿ ಸ್ಥಾನದಲ್ಲಿದೆ. ಅಲ್ಲದೇ ಅಮೆರಿಕದ ಆರ್ಥಿಕತೆ ಚೇತರಿಕೆಗೆ ನೆರವು ನೀಡಲು ಅಮೆರಿಕ ವಿತ್ತ ಸಚಿವಾಲಯ ಪ್ಯಾಕೇಜ್ ಘೋಷಣೆಯ ನಿರೀಕ್ಷೆಯಲ್ಲಿದೆ. ಆದರೆ ಅಮೆರಿಕದ ಆಂತರಿಕ ರಾಜಕೀಯದಿಂದಾಗಿ ಪ್ಯಾಕೇಜ್ ಘೋಷಣೆ ವಿಳಂಬವಾಗಿದೆ.

ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೊನಾಲ್ಡ್ ಟ್ರಂಪ್ ಅವರ ಮರು ಆಯ್ಕೆ ಅನಿಶ್ಚಿತತೆಯಲ್ಲಿದೆ. ಹೀಗಾಗಿ ರಾಜಕೀಯ ಕಾರಣದಿಂದಾಗಿ ಆರ್ಥಿಕ ಉತ್ತೇಜನದ ಪ್ಯಾಕೇಜ್ ಘೋಷಣೆ ವಿಳಂಬವಾಗುತ್ತಿರುವುದಾಗಿ ವಿಶ್ಲೇಷಿಸಲಾಗಿದೆ. ಇದು ವಿಶ್ವ ಆರ್ಥಿಕತೆಗೆ ಕೆಟ್ಟ ವಿಷಯವಾಗಿದ್ದು, ಶೇರು ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

Advertisement

ಚೀನಾ ಸಂಬಂಧ

ಅಮೆರಿಕದ ರೀತಿಯಲ್ಲಿ ಚೀನಾದ ಜಾಗತಿಕ ವ್ಯವಹಾರದ ಮನಸ್ಥಿತಿ ಕೂಡಾ ಮುಖ್ಯವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಅಮೆರಿಕ, ಭಾರತ ಮತ್ತು ಇತರ ಏಷ್ಯಾ ಪೆಸಿಫಿಕ್ ದೇಶಗಳು ನಿರಂತರವಾಗಿ ಚೀನಾ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಕೂಡಾ ಒಂದು ಕಾರಣವಾಗಿದೆ. ಚೀನಾ, ಅಮೆರಿಕ ನಡುವಿನ ಸಂಘರ್ಷ ಕೂಡಾ ಮುಂದುವರಿದಿರುವುದು ಶೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ಕೋವಿಡ್ ಪುನರಾಗಮನ ಭೀತಿ:

ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಮತ್ತೊಂದು ಸುತ್ತಿನ ಕೋವಿಡ್ ಸೋಂಕು ಹಬ್ಬತೊಡಗಿದೆ. ಲಾಕ್ ಡೌನ್ ನಿಂದ ಮತ್ತೆ ಸಹಜಸ್ಥಿತಿಗೆ ಬರುತ್ತಿರುವಂತೆಯೇ ಕೋವಿಡ್ 2ನೇ ಅಲೆಯ ಹೊಡೆತ ಕೂಡಾ ಶೇರುಪೇಟೆ ಮೇಲೆ ಪರಿಣಾಮ ಬೀರಿದೆ.

Advertisement

Udayavani is now on Telegram. Click here to join our channel and stay updated with the latest news.

Next