ಮುಂಬೈ: ಏಷ್ಯಾದ ಷೇರುಪೇಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಬುಧವಾರ (ಜನವರಿ 15) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲೇ ಏರುಗತಿ ಕಂಡಿದ್ದು, ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 400 ಅಂಕಗಳಷ್ಟು ಏರಿಕೆ ಕಂಡಿದ್ದು, 76,900 ಅಂಕಗಳ ಗಡಿ ದಾಟಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಸುಮಾರು 100 ಅಂಕಗಳಷ್ಟು ಜಿಗಿತದೊಂದಿಗೆ 23,273.55 ಅಂಕಗಳ ಗಡಿ ತಲುಪಿದೆ.
11-45ರ ಹೊತ್ತಿಗೆ ಷೇರುಪೇಟೆ ಸಂವೇದಿ ಸೂಚ್ಯಂಕ 300 ಅಂಕಗಳಷ್ಟು ಏರಿಕೆಯೊಂದಿಗೆ 76,800 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿಸಿದೆ. ಎನ್ ಎಸ್ ಇ ನಿಫ್ಟಿ 75 ಅಂಕಗಳಷ್ಟು ಏರಿಕೆ ಕಂಡಿದೆ.
ಷೇರುಪೇಟೆ ಸೂಚ್ಯಂಕ ಜಿಗಿತದ ಪರಿಣಾಮ ಪವರ್ ಗ್ರಿಡ್, ಎನ್ ಟಿಪಿಸಿ, ಝೋಮೊಟೊ, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಮಾರುತಿ ಷೇರುಗಳು ಲಾಭ ಗಳಿಸಿದೆ. ಮತ್ತೊಂದೆಡೆ ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ನೆಸ್ಲೆ, ಮಹೀಂದ್ರ & ಮಹೀಂದ್ರ, ಆಕ್ಸಿಸ್ ಬ್ಯಾಂಕ್ ಷೆರುಗಳು ನಷ್ಟ ಕಂಡಿದೆ.
ಜಾಗತಿಕ ಷೇರುಪೇಟೆ ಟ್ರೆಂಡ್:
ಇಂದಿನ ಏಷ್ಯನ್ ಷೇರುಮಾರುಕಟ್ಟೆಯ ವಹಿವಾಟು ಧನಾತ್ಮಕವಾಗಿದ್ದು, ಸಿಯೋಲ್, ಹಾಂಗ್ ಕಾಂಗ್ ಮತ್ತು ಟೋಕಿಯೋ ಷೇರುಪೇಟೆ ಸೂಚ್ಯಂಕ ಜಿಗಿತ ಕಂಡಿದೆ. ಶಾಂಘೈ ಷೇರುಪೇಟೆ ಸೂಚ್ಯಂಕ ಇಳಿಕೆಯೊಂದಿಗೆ ವಹಿವಾಟು ಮುಂದುವರಿಸಿದೆ.