Advertisement

ವಾರಾಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ ಚೇತರಿಕೆ : ಮಧ್ಯಾಂತರದಲ್ಲಿ ಸೂಚ್ಯಂಕ 46,309ಕ್ಕೆ ಜಿಗಿತ

07:50 AM Dec 12, 2020 | sudhir |

ಮುಬಯಿ: ವಾರಾಂತ್ಯವಾಗಿರುವ ಶುಕ್ರವಾರ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್‌ನಲ್ಲಿ ಉತ್ಸಾಹದಾ ಯಕವಾಗಿಯೇ ವಹಿವಾಟು
ಮುಕ್ತಾಯವಾಗಿದೆ. ಬಿಎಸ್‌ಇ ಸೂಚ್ಯಂಕ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿ ಮುಕ್ತಾಯಗೊಂಡಿದೆ. ದಿನದ ಅಂತ್ಯಕ್ಕೆ
ಸೂಚ್ಯಂಕ 139.13 ಪಾಯಿಂಟ್ಸ್‌ ಏರಿಕೆಯಾಗುವ ಮೂಲಕ 46,099.01ರಲ್ಲಿ ಕೊನೆಯಾಗಿದೆ. ನಿಫ್ಟಿ ಸೂಚ್ಯಂಕ ಕೂಡ
35.55 ಪಾಯಿಂಟ್ಸ್‌ ಜಿಗಿದು, 13,513.85ರಲ್ಲಿ ಕೊನೆಯಾಯಿತು.

Advertisement

ಇಂದಿನ ವ್ಯವಹಾರದಲ್ಲಿ ಒಎನ್‌ ಜಿಸಿಯ ಷೇರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಯಿತು. ಎನ್‌ಟಿಪಿಸಿ, ಟಾಟಾ ಸ್ಟೀಲ್‌, ಐಟಿಸಿ, ಐಸಿಐಸಿಐ ಬ್ಯಾಂಕ್‌, ಟೈಟನ್‌, ಬಜಾಜ್‌ ಅಟೋ ಮತ್ತು ಎಸ್‌ಬಿಐ ಷೇರುಗಳು ಅನಂತರದ ಸ್ಥಾನಗಳಲ್ಲಿ ಬಿಕರಿಯಾದವು. ಗುರುವಾರ ಹೊರತುಪಡಿಸಿ ಈ ವಾರ ಬಿಎಸ್‌ಇ ಸೂಚ್ಯಂಕ ಒಟ್ಟು 1,019.46, ನಿಫ್ಟಿ ಸೂಚ್ಯಂಕ 255.30 ಪಾಯಿಂಟ್ಸ್‌ಗಳಷ್ಟು
ಏರಿಕೆಯಾಗಿವೆ.

ಕಾರಣಗಳೇನು?
– ಬ್ರೆಕ್ಸಿಟ್‌ ಡೀಲ್‌, ಅಮೆರಿಕದಲ್ಲಿ ಆರ್ಥಿಕ ಪ್ಯಾಕೇಜ್‌ ಘೋಷಣೆ ಬಗೆಗಿನ ಮಾತುಕತೆ ಪ್ರಗತಿ ಕಾಣದ್ದು ಸೂಚ್ಯಂಕ ಏರಿಳಿತಕ್ಕೆ ಕಾರಣ
– ಧನಾತ್ಮಕವಾಗಿ ವಹಿವಾಟು ಶುರುವಾದರೂ, ಜಾಗತಿಕ ಷೇರುಪೇಟೆಯ ಪ್ರಭಾವ ಸೆನ್ಸೆಕ್ಸ್‌ ಓಟಕ್ಕೆ ಬ್ರೇಕ್‌.
– ಬಿಎಸ್‌ಇನಲ್ಲಿ ಕೊನೆಯ ಹಂತದಲ್ಲಿ ಖರೀದಿ ಮೂಡ್‌ ಇದ್ದ ಕಾರಣ ಪರಿಸ್ಥಿತಿ ಸುಧಾರಿಸಲು ನೆರವು

Advertisement

Udayavani is now on Telegram. Click here to join our channel and stay updated with the latest news.

Next