ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನ ಪರಿಣಾಮ ಬುಧವಾರ (ಏಪ್ರಿಲ್ 06) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 560ಕ್ಕೂ ಅಧಿಕ ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಹಳೆ ಮೀನು ಮಾರುಕಟ್ಟೆ ಸ್ವಚ್ಛತೆ ಮಾಡದ್ದಕ್ಕೆ ಆಕ್ರೋಶ: ಪುರಸಭೆ ಮುತ್ತಿಗೆ ಹಾಕಿದ ಮಹಿಳೆಯರು
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 566.09 ಅಂಕಗಳಷ್ಟು ಇಳಿಕೆಯಾಗಿದ್ದು, 59,610.41 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 149.70 ಅಂಕ ಕುಸಿತವಾಗಿದ್ದು, 17,807.70 ಅಂಕಗಳ ಮಟ್ಟ ತಲುಪಿದೆ.
ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ ಲೈಫ್, ಎಚ್ ಸಿಎಲ್ ಟೆಕ್ನಾಲಜೀಸ್ ಮತ್ತು ಟೆಕ್ ಮಹೀಂದ್ರ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಕೋಲ್ ಇಂಡಿಯಾ, ಐಒಸಿ, ಎನ್ ಟಿಪಿಸಿ, ಟಾಟಾ ಸ್ಟೀಲ್ ಮತ್ತು ಪವರ್ ಗ್ರಿಡ್ ಷೇರುಗಳು ಲಾಭಗಳಿಸಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 481.86 ಅಂಕ ಇಳಿಕೆಯಾಗಿದ್ದು, 59,694 ಅಂಕಗಳಲ್ಲಿ ಆರಂಭಿಕ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 138.25 ಅಂಕ ಕುಸಿತದೊಂದಿಗೆ 17,819.19 ಅಂಕ ತಲುಪಿತ್ತು.