ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಮಿಶ್ರ ವಹಿವಾಟಿನ ಪರಿಣಾಮ ಬುಧವಾರ (ನವೆಂಬರ್ 10) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 81 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ.
ಇದನ್ನೂ ಓದಿ:ಆತಂಕ ಪಡಬೇಡಿ; ಉತ್ತರಪ್ರದೇಶದ ಕಾನ್ಪುರ್ ನಲ್ಲಿ ನೂರಕ್ಕೂ ಅಧಿಕ ಝೀಕಾ ವೈರಸ್ ಪತ್ತೆ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 80.63 ಅಂಕ ಇಳಿಕೆಯಾಗಿದ್ದು, 60,352.82 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 27.05 ಅಂಕಗಳಷ್ಟು ಇಳಿಕೆಯಾಗಿದ್ದು, 18,017.20 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಇಂಡಸ್ ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಎಚ್ ಯುಎಲ್, ಏಷ್ಯನ್ ಪೇಂಟ್ಸ್, ಟೈಟಾನ್ ಮತ್ತು ಎಸ್ ಬಿಐ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಭಾರ್ತಿ ಏರ್ ಟೆಲ್, ಮಹೀಂದ್ರ ಆ್ಯಂಡ್ ಮಹೀಂದ್ರ, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಐಟಿಸಿ ಷೇರುಗಳು ಲಾಭಗಳಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಹಣದುಬ್ಬರದ ಪರಿಣಾಮ ದೇಶೀಯ ಷೇರುಮಾರುಕಟ್ಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿಯೇ ಹೂಡಿಕೆದಾರರು ನಿರಾಸಕ್ತಿ ತೋರಿರುವುದಾಗಿ ವರದಿ ತಿಳಿಸಿದೆ.