Advertisement

ಕೋವಿಡ್ ಲಸಿಕೆ ತಯಾರಿಕೆ ಫಾರ್ಮುಲಾ ಬೇರೆ ಕಂಪನಿಗಳ ಜತೆಗೂ ಹಂಚಿಕೊಳ್ಳಿ: ಕೇಜ್ರಿವಾಲ್

02:59 PM May 11, 2021 | Team Udayavani |

ನವದೆಹಲಿ:ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇತರ ಕಂಪನಿಗಳ ಜತೆಗೂ ಕೋವಿಡ್ ಲಸಿಕೆ ಉತ್ಪಾದನೆಯ ಫಾರ್ಮುಲಾವನ್ನು ಹಂಚಿಕೊಳ್ಳಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.

Advertisement

ಕೇಂದ್ರ ಸರ್ಕಾರ ಕೇವಲ ಎರಡು ಕಂಪನಿಗಳ ಜತೆ ಮಾತ್ರ ಲಸಿಕೆ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ. ಆದರೆ ಇನ್ನಷ್ಟು ಕಂಪನಿಗಳ ಜತೆ ಕೋವಿಡ್ ಲಸಿಕೆ ಉತ್ಪಾದನೆಯ ಫಾರ್ಮುಲಾವನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಲಸಿಕೆ ಉತ್ಪಾದನೆಗೆ ಮುಂದಾಗಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಈ ಎರಡು ಕಂಪನಿಗಳಿಂದ ಲಸಿಕೆ ಉತ್ಪಾದನೆಯ ಫಾರ್ಮುಲಾವನ್ನು ಸಂಗ್ರಹಿಸಿ ಬೇರೆ, ಬೇರೆ ಕಂಪನಿಗಳ ಜತೆ ಹಂಚಿಕೊಳ್ಳಬೇಕು. ಇದರಿಂದ ದೇಶದಲ್ಲಿ ಹೆಚ್ಚು ಲಸಿಕೆ ಉತ್ಪಾದಿಸಲು ಸಾಧ್ಯವಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಕೇಜ್ರಿವಾಲ್  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next