Advertisement

WTC Final 2023: ಬ್ರಾಡ್ಮನ್-  ಬಾರ್ಡರ್‌ ದಾಖಲೆ ಸರಿಗಟ್ಟಿದ ಶಾರ್ದೂಲ್ ಠಾಕೂರ್

10:51 AM Jun 10, 2023 | Team Udayavani |

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ದ ಆಸ್ಟ್ರೇಲಿಯಾ ಹಿಡಿತ ಸಾಧಿಸಿದೆ. ಎರಡು ದಿನಗಳ ಆಟ ಬಾಕಿಯಿದ್ದು, ಪ್ಯಾಟ್ ಕಮಿನ್ಸ್ ಬಳಗವು 296 ರನ್ ಮುನ್ನಡೆ ಸಾಧಿಸಿದೆ.

Advertisement

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು 296 ರನ್ ಗಳನ್ನು ಗಳಿಸಿತ್ತು. ಒಂದು ಹಂತದಲ್ಲಿ 152 ರನ್ ಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ನಂತರ ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್ ಠಾಕೂರ್ ಶತಕದ ಜೊತೆಯಾಟವಾಡಿ ಆಧರಿಸಿದರು.

ಭಾರತ ಟೆಸ್ಟ್‌ ತಂಡದ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ವಿಶಿಷ್ಟ ಸಾಧನೆ ಮಾಡಿದ್ದಾರೆ. ಓವಲ್‌ ಕ್ರೀಡಾಂಗಣದಲ್ಲಿ ಸತತ ಮೂರು ಅರ್ಧಶತಕ ಬಾರಿಸುವ ಮೂಲಕ ಸರ್‌ ಬ್ರಾಡ್‌ಮನ್‌ ಮತ್ತು ಅಲನ್‌ ಬಾರ್ಡರ್‌ ಅವರ ದಾಖಲೆ ಸರಿಗಟ್ಟಿದ್ದಾರೆ. ಠಾಕೂರ್‌ ಅವರು 57(36), 60(72) ಮತ್ತು 51(109) ರನ್‌ ಬಾರಿಸಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅಗ್ರ ಬ್ಯಾಟ್ಸ್‌ಮನ್‌ಗಳ ಎಲೈಟ್‌ ಕ್ಲಬ್‌ ಗೆ ಸೇರಿದ್ದಾರೆ.

ಇದನ್ನೂ ಓದಿ:Congress ತೊರೆದು ಹೊಸ ಪಕ್ಷ ಕಟ್ಟುವತ್ತ ಸಚಿನ್ ಪೈಲಟ್ ಚಿತ್ತ? ಏನಿದು ಹೊಸ ಬೆಳವಣಿಗೆ?

ಶುಕ್ರವಾರ ಫೈನಲ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ 109 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಇದರಲ್ಲಿ ಆರು ಬೌಂಡರಿ ಒಳಗೊಂಡಿತ್ತು. ಅಲ್ಲದೆ ರಹಾನೆ ಜೊತೆ ಸೇರಿ ಏಳನೇ ವಿಕೆಟ್ ಗೆ 109 ರನ್ ಜೊತೆಯಾಟವಾಡಿದರು.

Advertisement

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ: 469 & 123/4 (44)

ಭಾರತ: 296

Advertisement

Udayavani is now on Telegram. Click here to join our channel and stay updated with the latest news.

Next