ವೇಗಿ ಶಾರ್ದೂಲ್ ಠಾಕೂರ್ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ಪ್ರಮುಖ 4 ಓವರ್‌ಗೆ 23 ರನ್ ಬಿಟ್ಟುಕೊಟ್ಟು ಪ್ರಮುಖ 3 ವಿಕೆಟ್ ಕಬಳಿಸಿದ್ದಾರೆ. ಸ್ವಿಂಗ್, ಇನ್‌ಸ್ವಿಂಗ್ ಮೂಲಕ ಲಂಕಾ ಬ್ಯಾಟ್ಸ್‌ಮನ್ ನಿದ್ದೆಗೆಡಿಸಿದ ಶಾರ್ದೂಲ್ ಠಾಕೂರ್ ಆರಂಭದ ಹಂತದಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದರು. ಆದರೆ ನಿಧಾನವಾಗಿ ಎದುರಾಳಿ ಬ್ಯಾಟ್ಸ್‌ಮನ್ ವಿರುದ್ಧ ಹಿಡಿತ ಸಾಧಿಸಿ ಧನಂಜಯ ಡಿ ಸಿಲ್ವ, ಇಸುರು ಉದಾನ ಹಾಗೂ ಲಸಿತ್ ಮಾಲಿಂಗ ವಿಕೆಟ್ ಕಬಳಿಸಿದರು. ಮಾತ್ರವಲ್ಲ ಲಂಕಾದ ಒಟ್ಟಾರೆ ರನ್ ನಿಯಂತ್ರಿಸಿದರು. ಕೊನೆಯ ಹಂತದಲ್ಲಿ ಈ ಮೂರು ವಿಕೆಟ್ ಮೇಲೆ ಹಿಡಿತ ಸಾಧಿಸದೆ ಹೋಗಿದ್ದರೆ ಲಂಕಾ 180 ರನ್ ಗಡಿ ದಾಟುವ ಸಾಧ್ಯತೆ ಇತ್ತು. ಶಾದೂìಲ್ ಠಾಕೂರ್ ಲಂಕಾ ತಂಡದ ಬ್ಯಾಟ್ಸ್‌ಮನ್‌ಗೆ ಯಾವುದೇ ಅವಕಾಶ ನೀಡಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. 28 ವರ್ಷದ ಶಾರ್ದೂಲ್ ಠಾಕೂರ್ ಇದುವರೆಗೆ ಒಟ್ಟು 9 ಟಿ20 ಪಂದ್ಯವನ್ನಾಡಿದ್ದಾರೆ. 27ಕ್ಕೆ4 ವಿಕೆಟ್ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಒಟ್ಟು 11 ವಿಕೆಟ್ ಪಡೆದಿದ್ದಾರೆ. 7 ಏಕದಿನ ಪಂದ್ಯವಾಡಿದ್ದು ಒಟ್ಟು 8 ವಿಕೆಟ್ ಪಡೆದಿದ್ದಾರೆ. 52ಕ್ಕೆ4 ವಿಕೆಟ್ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಿರುವ ಶಾರ್ದೂಲ್ ಠಾಕೂರ್ ಕೇವಲ 10 ಎಸೆತವನ್ನಷ್ಟೆ ಎಸೆದಿದ್ದಾರೆ. ಯಾವುದೇ ವಿಕೆಟ್ ಲಭಿಸಿಲ್ಲ.