Advertisement

ಹಿಂದುತ್ವದ ಬಗ್ಗೆ ”ಶಾರದಾ ವಿಶ್ವವಿದ್ಯಾಲಯ’ವಿವಾದ

09:26 PM May 07, 2022 | Team Udayavani |

ಗ್ರೇಟರ್‌ ನೊಯ್ಡಾ: ಉತ್ತರಪ್ರದೇಶದ ಶಾರದಾ ವಿಶ್ವವಿದ್ಯಾಲಯದ ಬಿಎ ರಾಜ್ಯಶಾಸ್ತ್ರ ಪ್ರಶ್ನೆಪತ್ರಿಕೆಯೊಂದರಲ್ಲಿ ವಿಚಿತ್ರ ಪ್ರಶ್ನೆಯೊಂದನ್ನು ಕೇಳಲಾಗಿದೆ. ಪರಿಣಾಮ ಈ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಉಪನ್ಯಾಸಕರು ಅಮಾನತಾಗಿದ್ದಾರೆ. ನಾಜಿ ವಾದ, ಫ್ಯಾಸಿಸಂ ಹಾಗೂ ಹಿಂದುತ್ವದ ನಡುವೆ ಏನಾದರೂ ಹೋಲಿಕೆಗಳಿವೆಯೇ? ಎಂದು ಕೇಳಲಾಗಿದೆ.

Advertisement

ಈ ವಿಷಯ ಸಾಮಾಜಿಕ ತಾಣಗಳಲ್ಲಿ ಬಹಿರಂಗವಾದ ಬಳಿಕೆ ಭಾರೀ ವಿವಾದ ಉಂಟಾಗಿದೆ. ತಕ್ಷಣ ಮಧ್ಯಪ್ರವೇಶಿಸಿರುವ ಶಾರದಾ ವಿಶ್ವವಿದ್ಯಾಲಯ, ಸಾಮಾಜಿಕ ಸಾಮರಸ್ಯ ಹಾನಿ ಮಾಡುವ ಇಂತಹ ಯಾವುದೇ ಪ್ರಶ್ನೆಗಳನ್ನು ವಿವಿ ಬೆಂಬಲಿಸುವುದಿಲ್ಲ ಎಂದಿದೆ ಮಾತ್ರವಲ್ಲ ತನಿಖೆಗೆ ಸಮಿತಿಯನ್ನೂ ರಚಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ನಾಯಕ ವಿಕಾಸ್‌ ಪ್ರೀತಮ್‌ ಸಿನ್ಹಾ ಈ ಪ್ರಶ್ನೆಪತ್ರಿಕೆಯನ್ನು ಯಾರೋ ಮುಸ್ಲಿಂ ಉಪನ್ಯಾಸಕರೇ ಸಿದ್ಧಪಡಿಸಿರಬೇಕು ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next