Advertisement

ಚಿನ್ನ-ಬೆಳ್ಳಿ ಕಾರ್ಮಿಕರಿಗೂ ಪರಿಹಾರಕ್ಕೆ ಶರವಣ ಆಗ್ರಹ

01:53 PM May 07, 2020 | mahesh |

ಬೆಂಗಳೂರು: ರಾಜ್ಯದ ಜನರ ಪರಿಸ್ಥಿತಿಗೆ ಮಿಡಿದ ಸರ್ಕಾರ, ವಿಶೇಷ ಪ್ಯಾಕೇಜ್‌ ಘೋಷಿಸಿರುವುದು ಸ್ವಾಗತಾರ್ಹ. ಆದರೆ, ಚಿನ್ನ-ಬೆಳ್ಳಿ ಕಾರ್ಮಿಕರನ್ನು ಕಡೆಗಣಿಸಿರುವುದು ಬೇಸರದ ಸಂಗತಿ ಎಂದು ವಿಪ ಸದಸ್ಯ ಹಾಗೂ ಜ್ಯುವೆಲರಿ ಅಸೋಸಿಯೇಷನ್‌ ಅಧ್ಯಕ್ಷ ಟಿ.ಎ. ಶರವಣ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಸವಿತಾ ಸಮಾಜ, ರೈತರು, ಆಟೋ ಚಾಲಕರಿಗೆ ಸರ್ಕಾರ ಘೋಷಿಸಿರುವ 1,610 ಕೋಟಿ ರೂ. ಪ್ಯಾಕೇಜ್‌ ಘೋಷಿಸಿದೆ. ಇದರಿಂದ ಆ ಸಮುದಾಯಗಳಿಗೆ ಅನುಕೂಲ ಆಗಲಿದೆ. ತೀವ್ರ ಸಂಕಷ್ಟದಲ್ಲಿ ರುವ ಚಿನ್ನ-ಬೆಳ್ಳಿ ಕೆಲಸ ಮಾಡುವ ಕಾರ್ಮಿಕರಿಗೂ ಪರಿಹಾರ ಘೋಷಿಸ ಬೇಕಿತ್ತು. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸದಿರುವುದು ಅಸಮಾಧಾನ ಉಂಟು ಮಾಡಿದೆ. ರಾಜ್ಯದಲ್ಲಿ ಚಿನ್ನ-ಬೆಳ್ಳಿ ಕೆಲಸ ಮಾಡುವ ಸುಮಾರು ಐದು ಲಕ್ಷ ಕಾರ್ಮಿಕರಿದ್ದಾರೆ. ಪ್ರತಿ ಶುಭ ಸಮಾರಂಭಗಳಿಗೆ ಆಭರಣ ತಯಾರಿಸುವ ಕಾರ್ಮಿಕರು, ಸಿಲುಕಿದ್ದಾರೆ. ಅವರಿಗೆ ಪರಿಹಾರ ಘೋಷಿಸ ಬೇಕು ಎಂದು ಶರವಣ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next