Advertisement

ಮನುಕುಲಕ್ಕೆ ಶರಣರ ಕೊಡುಗೆ ಅಪಾರ

01:19 PM Mar 23, 2022 | Team Udayavani |

ಗಲಗಲಿ: ನೇರ ನುಡಿಯ ನಿಷ್ಟುರತೆಗೆ ಹೆಸರಾದ ಮೇದಾವಿ ಶರಣರು ಅಂಬಿಗರ ಚೌಡಯ್ಯನವರು, ಇವರ ವಿಚಾರಗಳು, ನುಡಿಗಳು, ನಡವಳಿಕೆಗಳು ಇಂದು ಮಾನವಕುಲಕ್ಕೆ ಮಾರ್ಗದರ್ಶನವಾಗಿವೆ. 12ನೇ ಶತಮಾನದ ಶರಣರ ಕೊಡುಗೆ ಅಪಾರವಾದದ್ದು ಎಂದು ಮಾಜಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.

Advertisement

ಗಲಗಲಿ ಗ್ರಾಮದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದ ಅಂಬಿಗರ ಚೌಡಯ್ಯನವರು ಇಂದಿಗೂ ಇಷ್ಟು ಪ್ರಚಲಿತವಾಗಿದ್ದಾರೆಂದರೆ ಅವರು ಪಡೆದುಕೊಂಡಿರುವ ಜ್ಞಾನ ಸಂಪತ್ತು, ಅವರಲ್ಲಿರುವ ಕಾಯಕ ಶ್ರದ್ಧೆ, ನಿಷ್ಠೆಗಳೆ ಕಾರಣವಾಗಿದೆ. ಸಮಾಜದಲ್ಲಿ ಯಾರು ಶಿಕ್ಷಣವಂತ, ವಿದ್ಯಾವಂತ ಇರುವವರಿಗೆ ಸದಾ ಗೌರವವಿರುತ್ತದೆ. ಎಲ್ಲ ಕ್ಷೇತ್ರದಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದರು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಖೋತ ಮಾತನಾಡಿ, ಗಂಗಾಮತಸ್ಥರು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಪ್ರಬಲರಾಗಬೇಕು. ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ನೀಡಿ ಒಳ್ಳೆಯ ಸಂಸ್ಕಾರ ನೀಡಿ ಅವರನ್ನು ಸಮಾಜದ ಪ್ರಬುದ್ಧರನ್ನಾಗಿ ಮಾಡಬೇಕು. ಗಂಗಾಮತಸ್ಥರು ಮೃದು ಸ್ವಭಾವ ಉಳ್ಳವರು. ಎಲ್ಲ ಸಮುದಾಯಗಳ ಜತೆ ಉತ್ತಮ ಬಾಂಧವ್ಯದೊಂದಿಗೆ ಬೆರೆತು ಬದುಕನ್ನು ಕಟ್ಟಿಕೊಂಡವರು ಎಂದು ಹೇಳಿದರು.

ಬಿಜೆಪಿ ತಾಲೂಕುಕಾರ್ಯದರ್ಶಿ ಹೊಳಬಸು ಬಾಳಶಟ್ಟಿ ಮಾತನಾಡಿ, ಅಂಬಿಗರು ನಂಬಿಗೆಯವರು. ನಿಷ್ಟೆ, ಶ್ರದ್ಧೆ, ಒಳ್ಳೆಯ ಮನೋಭಾವಗಳು ಇವರ ಬೆಳವಣಿಗೆಗೆ ದಾರಿದೀಪವಾಗಿದೆ. ಈ ಸಮುದಾಯಕ್ಕೆ ಆರ್ಥಿಕವಾಗಿ ಸಚಿವ ಮುರುಗೇಶ ನಿರಾಣಿ ಅವರಿಂದ ಸಹಾಯ ಕೊಡಿಸುವ ಭರವಸೆ ನೀಡಿದರು.

Advertisement

ಮರೇಗುದ್ದಿಯ ದಿಗಂಬರೇಶ್ವರ ಸಂಸ್ಥಾನ ಮಠದ ಪ್ರಭು ಶ್ರೀ ತೋಂಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್‌ ಅಧ್ಯಕ್ಷ ರಾಮಣ್ಣ ಕಡಾಕಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್‌. ಆರ್‌.ಪಾಟೀಲ್‌ ನೂತನ ಕಟ್ಟಡ ಉದ್ಘಾಟಿಸಿದರು. ಈರಣ್ಣ ಸ್ವಾಮಿಗಳು ಬುಕ್ಕಿಟಗಾರ್‌, ಈಶ್ವರ್‌ ಪುರಾಣಿಕ, ಎಂ.ಎನ್‌. ಪಾಟೀಲ್‌, ಈರಣಗೌಡ ನ್ಯಾಮಗೌಡರ, ನಿಂಗಣ್ಣ ಗೋಳಿಪಲ್ಲೆ, ರೂಪಾ ಹಿರೇಮಠ, ಮಗೆಪ್ಪ ದೇವನಾಳ, ರಾಮಾಚಾರ್ಯ ಕಟ್ಟಿ, ನಾಗಪ್ಪ ಅಂಬಿ, ಗಡ್ಡೆಪ್ಪಣ್ಣ ಬಾರಕೇರ, ಕಲ್ಲಪ್ಪ ಗಡ್ಡಿ, ಪರಸಪ್ಪ ವಾಲಿಕಾರ್‌, ಶಿವಗಿರಿ ದಳವಾಯಿ, ರವಿ ಮಂಟೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next