Advertisement

ಭಕ್ತರಿಗಾಗಿ ಬಾಗಿಲು ತೆರೆದ ಶರಣಬಸವೇಶ್ವರ ಮಂದಿರ

07:19 AM Jun 09, 2020 | Suhan S |

ಕಲಬುರಗಿ: ಕೋವಿಡ್ ಲಾಕ್‌ಡೌನ್‌ನಿಂದ ಮೂರು ತಿಂಗಳಿಂದ ಮುಚ್ಚಲಾಗಿದ್ದ ಜಿಲ್ಲೆಯ ಬಹುತೇಕ ಮಂದಿರಗಳು, ಮಸೀದಿಗಳು, ಗುರುದ್ವಾರಗಳು ಮತ್ತು ಚರ್ಚ್‌ಗಳ ಬಾಗಿಲುಗಳು ಸಕಲ ಸಿದ್ಧತೆಗಳೊಂದಿಗೆ ಸೋಮವಾರ ತೆರೆದಿದ್ದವು.

Advertisement

ನಗರದ ಪ್ರಸಿದ್ಧ ಶರಣಬಸವೇಶ್ವರ ದೇವಾಲಯ, ಕೋರಂಟಿ ಹನುಮಾನ ಮಂದಿರ, ರಾಮ ಮಂದಿರ, ಕೃಷ್ಣ ಮಂದಿರ, ವೈಷ್ಣೋದೇವಿ ಮಂದಿರಗಳಲ್ಲಿ ಭಕ್ತರು ಬೆಳಗ್ಗೆಯೇ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯ್ದು ನಿಂತಿದ್ದರು. ಹಾಗೆ, ನಗರದ ಪ್ರಮುಖ ಮಸೀದಿಗಳು, ಚರ್ಚ್ ಗಳು ಹಾಗೂ ಗುರುದ್ವಾರಗಳಿಗೂ ಭಕ್ತರು ತೆರಳಿ ಪ್ರಾರ್ಥನೆ ಸಲ್ಲಿಸಿದರು.

ದೇವರ ದರ್ಶನಕ್ಕಾಗಿ ಆಗಮಿಸುವ ಭಕ್ತರ ಸುರಕ್ಷಿತೆಗಾಗಿ ದೇಗುಲಗಳ ಪ್ರವೇಶದ್ವಾರದಲ್ಲೇ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತಕ ಕಾಪಾಡಲು ಚೌಕ ಮತ್ತು ವೃತ್ತಾಕದಲ್ಲಿ ಬಣ್ಣ ಬಳಿದು ಒಬ್ಬೊಬ್ಬರಾಗಿ ಸಾಲಿನಲ್ಲಿ ಬರುವಂತೆ ಸೂಚಿಸಲಾಯಿತು. ಹೆಚ್ಚಿನ ಜನ ಸೇರಿದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಭಕ್ತರು ಮಾಸ್ಕ್ ಧರಿಸಿ ಬರುವುದನ್ನು ಕಡ್ಡಾಯಗೊಳಿಸಲಾಗಿತ್ತು.

ಅಪ್ಪನ ಗುಡಿಗೆ ಭಕ್ತರ ದಂಡು: ಶರಣಬಸವೇಶ್ವರ ದೇವಸ್ಥಾನದ ಬಾಗಿಲು ತೆರೆಯಲ್ಪಟ್ಟ ಕಾರಣ ಮೊದಲ ದಿನವೇ ಭಕ್ತರು ದಂಡು ಹರಿದುಬಂತು. ದೇವರ ದರ್ಶನ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿತ್ತು. ಪ್ರಥಮವಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ದೇವರ ದರ್ಶನ ಪಡೆದರು. ತದನಂತರ ಭಕ್ತಾದಿಗಳು ಸರದಿ ರೀತಿಯಲ್ಲಿ ಒಬ್ಬೊಬ್ಬರಾಗಿ ದರ್ಶನ ಪಡೆಯಲು ಆಗಮಿಸಿದರು.

ದೇವಸ್ಥಾನದ ಆವರಣದಲ್ಲಿ ತೆಂಗಿನಕಾಯಿ ಒಡೆಯುವುದು ಮತ್ತು ಅಭಿಷàಕ, ಪ್ರಸಾದ ವಿತರಣೆಗೆ ಅವಕಾಶ ಇರಲಿಲ್ಲ. ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಯಿತು. ಭಕ್ತರು ದೇವಸ್ಥಾನದ ಆವರಣಕ್ಕೆ ಆಗಮಿಸುತ್ತಿದ್ದಂತೆ ದೇಗುಲದ ಸಿಬ್ಬಂದಿ ಭಕ್ತಾದಿಗಳ ಕೈಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಿದರು. ಅದಾದ ನಂತರ ದೇವಸ್ಥಾನದ ಮುಖ್ಯದ್ವಾರಕ್ಕೆ ಸೋಂಕು ನಿವಾರಕ ಯಂತ್ರದ ಮುಖಾಂತರವೇ ಆಗಮಿಸುವ ವ್ಯವಸ್ಥೆ ಮಾಡಲಾಗಿತ್ತು. ದೇವರ ದರ್ಶನ ಪಡೆಯುವ ಸ್ಥಳದಲ್ಲಿಯೂ ಮತ್ತೆ ಸ್ಯಾನಿಟೈಸರ್‌ ಮಾಡಲಾಯಿತು. ಮಾರಕ ರೋಗ ಭಕ್ತರಿಗೆ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next