Advertisement
ವಚನ ಸಾಹಿತ್ಯಕ್ಕೆ ಕೊಡುಗೆ: ಶಿವಯೋಗಿ ಸಿದ್ಧರಾಮೇಶ್ವರರು ಸುಮಾರು ಅರವತ್ತೆಂಟು ಸಾವಿರದಷ್ಟು ವಚನ ರಚಿಸುವ ಮೂಲಕ ವಚನ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದ ಅಂಕು-ಡೊಂಕು ತಿದ್ದಲು ಈಗಲೂ ಸಿದ್ಧರಾಮೇಶ್ವರರ ವಚನ ಸಾಹಿತ್ಯ ದಾರಿದೀಪವಾಗಿದೆ. ಸಿದ್ಧರಾಮೇಶ್ವರರು ಸಮಾನತೆ ಹರಿಕಾರ ಹಾಗೂ ಶ್ರೇಷ್ಠ ಚಿಂತಕರಾಗಿದ್ದರು. ಹನ್ನೆರಡನೇ ಶತಮಾನದಲ್ಲಿಯೇ ಕೆರೆ-ಕಟ್ಟೆ, ಬಾವಿ ನಿರ್ಮಿಸುವುದಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಜೀವಜಲದ ಕುರಿತು ಜಾಗೃತಿ ಮೂಡಿಸಿದ ದೂರದೃಷ್ಟಿ ಅವರದು. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಹಾಗೂ ಅಂತರ್ಜಾತಿ ವಿವಾಹಕ್ಕೂ ಆದ್ಯತೆ ನೀಡುವ ಮೂಲಕ ಜಾತ್ಯತೀತ ವ್ಯವಸ್ಥೆಗೆ ಅಡಿಪಾಯ ಹಾಕಿದ್ದರು. ಇಂತಹ ಮಹನೀಯರ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.
ಹುಚ್ಚಪ್ಪಯ್ಯನ ಕಟ್ಟೆಯಿಂದ ಮಿನಿ ವಿಧಾನಸೌಧದ ಮುಖ್ಯ ವೇದಿಕೆವರೆಗೆ ನೂರಾರು ಸುಮಂಗಲೆಯರ ಕುಂಭಮೇಳ, ವಾದ್ಯ ವೈಭವಗಳೊಂದಿಗೆ ಸಾರೋಟದಲ್ಲಿ ಚಿತ್ರದುರ್ಗದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ನಗರದ ಹುಚ್ಚಪ್ಪಯ್ಯನ ಮಠದ ಫಕ್ಕೀರಯ್ಯ ಸ್ವಾಮೀಜಿ ಅವರ ಭವ್ಯ ಮೆರವಣಿಗೆ ಜರುಗಿತು.