Advertisement

ಈ ಫೋಟೋದಲ್ಲಿ ಇರುವ ಇಬ್ಬರೂ ಕನ್ನಡದ ಹೆಸರಾಂತ ನಟ-ನಟಿ : ಗುರುತಿಸುವಿರಾ?

12:20 PM Sep 18, 2021 | Team Udayavani |

ಇಂದು (ಸೆಪ್ಟಂಬರ್ 18) ಕನ್ನಡದ ಹಿರಿಯ ನಟಿ ಶ್ರುತಿ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ನಟಿಯ ಸಹೋದರ ಶರಣ್ ತಂಗಿಯ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

Advertisement

ಸೋಷಿಯಲ್ ಮೀಡಿಯಾದಲ್ಲಿ ಬಾಲ್ಯದ ಫೋಟೋ ಒಂದನ್ನು ಹಾಕಿ ಬರೆದಿರುವ ನಟ ಶರಣ್, ನನ್ನ ಪ್ರೀತಿಯ ತಂಗಿ ಹಾಗೂ ನನ್ನ ಬೆಸ್ಟ್ ಫ್ರೆಂಡ್ ಶೃತಿ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದಿದ್ದಾರೆ.

ಹಿರಿಯ ನಟಿ ಶ್ರುತಿ (Shruthi)ಅವರು ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ವಿಶಿಷ್ಟ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಹವಾ ಸೃಷ್ಟಿಸಿದ್ದ ಶ್ರುತಿ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹಿರಿಯ ನಟಿಯ ಜನ್ಮದಿನಕ್ಕೆ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next