Advertisement

ಅ. 13ರಿಂದ ಶರಣ ಸಂಸ್ಕೃತಿ ಉತ್ಸವ

12:13 PM Aug 05, 2018 | Team Udayavani |

ಚಿತ್ರದುರ್ಗ: ಮುರುಘಾಮಠದ ವತಿಯಿಂದ ಪ್ರತಿ ವರ್ಷ ನಡೆಸಲಾಗುವ “ಮಧ್ಯ ಕರ್ನಾಟಕದ ದಸರಾ ಮಹೋತ್ಸವ’ ಎಂದೇ ಹೆಸರಾಗಿರುವ “ಶರಣ ಸಂಸ್ಕೃತಿ ಉತ್ಸವ’ ಈ ವರ್ಷ ಅಕ್ಟೋಬರ್‌ 13 ರಿಂದ 22 ರವರೆಗೆ ನಡೆಯಲಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಮುರುಘಾ ಮಠದಲ್ಲಿ ಶನಿವಾರ ನಡೆದ ಶರಣ ಸಂಸ್ಕೃತಿ ಉತ್ಸವ-2018ರ ಪೂರ್ವಭಾವಿ ಸಭೆಯಲ್ಲಿ ಶರಣರು ಮಾತನಾಡಿದರು. ಈ ಬಾರಿಯ ಉತ್ಸವ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕಾರ್ಯಾಧ್ಯಕ್ಷರನ್ನಾಗಿ ಸಿದ್ದಾಪುರದ ವರ್ತಕ ಪಟೇಲ್‌ ಶಿವಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಸಚಿವ ಎಚ್‌. ಆಂಜನೇಯ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌, ಹನುಮಲಿ ಷಣ್ಮುಖಪ್ಪ, ಕೆ.ಸಿ. ವೀರೇಂದ್ರ (ಪಪ್ಪಿ) ವಿವಿಧ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ ಎಂದರು.

ಪೂರ್ವಭಾವಿ ಸಭೆಯಲ್ಲಿ ಶ್ರೀ ಪ್ರಸನ್ನ ವಾಲ್ಮೀಕಿ ಸ್ವಾಮೀಜಿ, ಹೆಬ್ಟಾಳು ಶ್ರೀ ಮಹಂತ ರುದ್ರೇಶ್ವರ ಸ್ವಾಮೀಜಿ,ಹಿರಿಯೂರು ಶ್ರೀ ಷಡಕ್ಷರಮುನಿ ಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶ್ರೀ ಬಸವ ಮಹಾಂತ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವ ನಾಗಿದೇವ ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಶ್ರೀ
ಜಯದೇವ ಸ್ವಾಮೀಜಿ, ಶ್ರೀ ಜಯ ಬಸವೇಶ್ವರ ಸ್ವಾಮೀಜಿ, ಶ್ರೀ ಬಸವ ರಮಾನಂದ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಫಾದರ್‌ ರಾಜು, ನಗರಸಭೆ ಅಧ್ಯಕ್ಷ ತಿಮ್ಮಣ್ಣ, ಶಂಕರಮೂರ್ತಿ, ಪಟೇಲ್‌ ಶಿವಕುಮಾರ್‌, ಎ.ಜೆ. ಪರಮಶಿವಯ್ಯ, ವೀರಶೈವ ಸಮಾಜದ ಅಧ್ಯಕ್ಷ ಎನ್‌. ಜಯಣ್ಣ, ಕೆ.ಎಸ್‌. ನವೀನ್‌, ಕೆಇಬಿ ಷಣ್ಮುಖಪ್ಪ, ನಾಗರಾಜ ಸಂಗಂ, ಆನಂದಮೂರ್ತಿ, ಶರೀಫಾಬಿ, ಸಿ.ಎಂ. ವೀರಣ್ಣ, ಎಲ್‌.ಬಿ. ರಾಜಶೇಖರ್‌, ಗಾಯತ್ರಿ ಶಿವರಾಂ, ಕೆ.ಎಂ. ವೀರೇಶ್‌, ಜಿತೇಂದ್ರ ಹಾಗೂ ದಾವಣಗೆರೆ, ಚನ್ನಗಿರಿ, ಹೊಸದುರ್ಗ, ಗದಗ, ನರಗುಂದ, ತುಮಕೂರು, ತಿಪಟೂರು ಮತ್ತು ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಜನರು ಭಾಗವಹಿಸಿದ್ದರು. 

ಬಸವಾದಿ ಶರಣರ ಆಶಯ ಬಿತ್ತರಿಸುವ ಕಾರ್ಯಕ್ರಮ ಶರಣ ಸಂಸ್ಕೃತಿ ಉತ್ಸವ ಎಂದರೆ ವಿಶೇಷವಾಗಿರುತ್ತದೆ. ದಸರಾ ಉತ್ಸವವನ್ನು ರಾಜ ಮನೆತನದಿಂದ ಆಚರಿಸುತ್ತಿದ್ದರೆ, ಶರಣ ಸಂಸ್ಕೃತಿ ಉತ್ಸವ ಬಸವಾದಿ ಶರಣರ ಆಶಯಗಳನ್ನು ಬಿತ್ತರಿಸುವ ಕಾರ್ಯಕ್ರಮವಾಗಿದೆ. ರಾಜಕೀಯ, ನೀರಾವರಿ, ಶಿಕ್ಷಣ ಮೊದಲಾದ ಕ್ಷೇತ್ರಗಳ ಅಭಿವೃದ್ಧಿಗೆ ಬೆಳಕು ಚೆಲ್ಲುವಂಥದ್ದಾಗಿದೆ ಎಂದು ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಬಣ್ಣಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next