Advertisement
ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಮತ್ತು ವಿ.ಕೆ. ಪಾಂಡ್ಯನ್ ಅವರೇ ನವೀನ್ ಪಟ್ನಾಯಕ್ ಉತ್ತರಾಧಿಕಾರಿಯಾಗಲಿದ್ದಾರೆ ಎಂಬ ವದಂತಿಗಳ ಬಗ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.ಇದರ ಜತೆಗೆ ಪಾಂಡ್ಯನ್ ವಿರುದ್ಧ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳ ಬಗ್ಗೆ ಆಕ್ಷೇಪ ಮಾಡಿರುವ ಬಿಜೆಡಿ ಸಂಸ್ಥಾಪಕ “ಪಾಂಡ್ಯನ್ ಅವರು, ಪ್ರಾಮಾಣಿಕ ವ್ಯಕ್ತಿ ಮತ್ತು ನಿಯತ್ತು ಇರುವ ವ್ಯಕ್ತಿ. ಅಂಥವ ಬಗ್ಗೆ ಸಲ್ಲದ ಮಾತುಗಳು ಖಂಡನೀಯ’ ಎಂದು ಹೇಳಿದ್ದಾರೆ. ಪಾಂಡ್ಯನ್ ಹುದ್ದೆಯ ಆಕಾಂಕ್ಷಿಯಾಗಿ ಬಿಜೆಡಿಯನ್ನು ಸೇರಿಕೊಂಡಿಲ್ಲ. ಐಎಎಸ್ ಅಧಿಕಾರಿಯಾಗಿ 10 ವರ್ಷಗಳಿಂದ ಕೋವಿಡ್ ಅವಧಿಯಲ್ಲಿ, ಒಡಿಶಾಕ್ಕೆ ಅಪ್ಪಳಿಸಿದ್ದ 2 ಚಂಡಮಾರುತದ ಸಂದರ್ಭದಲ್ಲಿ ಅತ್ಯುತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರು ಎಂದರು.
“ತಮ್ಮ ಉತ್ತರಾಧಿಕಾರಿಯನ್ನು ಜನರೇ ಆಯ್ಕೆ ಮಾಡಬೇಕು. ಪಾಂಡ್ಯನ್ ನನ್ನ ಉತ್ತರಾಧಿಕಾರಿ ಅಲ್ಲ. ಈ ಅಂಶವನ್ನು ಮತ್ತೂಮ್ಮೆ ಸ್ಪಷ್ಟಪಡಿಸುತ್ತೇನೆ’ ಎಂದಿದ್ದಾರೆ. ಇದೇ ವೇಳೆ, ಆರೋಗ್ಯ ಸದೃಢವಾಗಿದೆ ಎಂದು ಪಟ್ನಾಯಕ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಆರೋಗ್ಯಯುತವಾಗಿಯೇ ಇರುತ್ತೇನೆ. ಚುನಾವಣೆ ಸಂದರ್ಭದಲ್ಲಿ ಬಿರುಸಿನ ಪ್ರಚಾರದಿಂದಾಗಿ ಕೊಂಚ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದಿದ್ದರಬಹುದು ಎಂದರು. ಅವರ ಆರೋಗ್ಯ ವಿಚಾರವನ್ನೆತ್ತಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರಲ್ಲಿ ಪ್ರಸ್ತಾಪಿಸಿದ್ದರು. ಅದಕ್ಕೆ ಪಟ್ನಾಯಕ್ ಆಕ್ಷೇಪವನ್ನೂ ಮಾಡಿದ್ದರು