Advertisement

ಶೃಂಗೇರಿ ಶ್ರೀಗಳಿಂದ ಶಾರದಾ ಪೂಜೆ

12:30 PM Nov 27, 2018 | |

ವಿಜಯಪುರ: ಧರ್ಮಾಚರಣೆ ಪ್ರತಿಯೊಬ್ಬ ಭಕ್ತನ ಆದ್ಯ ಕರ್ತವ್ಯ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರಭಾರತಿ ಶ್ರೀಗಳು ಹೇಳಿದರು. ಸನಾತನ ಧರ್ಮ ಪ್ರಚಾರಕ್ಕೋಸ್ಕರ ದೇಶಾದ್ಯಂತ ವಿಜಯಯಾತ್ರೆ ಹಮ್ಮಿಕೊಂಡಿರುವ ಶ್ರೀಗಳು, ವಿಜಯಪುರದ ಶಂಕರ ಮಠದಲ್ಲಿ ನಡೆದ ಸಭೆಯಲ್ಲಿ ಆಶೀವರ್ಚನ ನೀಡಿದರು.

Advertisement

ತನ್ನ ಪ್ರದೇಶಕ್ಕೆ ರಾಜನಾದವನು ಒಂದು ನಿಯಮ ಜಾರಿಗೆ ತಂದಂತೆ, ಇಡಿ ಜಗತ್ತಿಗೆ ರಾಜನಾದ ಭಗವಂತನು ಜಗದ ನಿಯಮ ಅನುಷ್ಠಾನಕ್ಕೆ ತಂದಿದ್ದಾನೆ. ಹೀಗಾಗಿ ಪ್ರತಿಯೊಬ್ಬರೂ ಧರ್ಮಾಚರಣೆ ಹಾಗೂ ಪಾಲನೆ ಮಾಡಬೇಕು. ಸನಾತನ ಧರ್ಮವನ್ನು ಎಲ್ಲೆಡೆ ಪಸರಿಸಿದ ಕೀರ್ತಿ ಜಗದ್ಗುರು ಶಂಕರ ಭಗವತ್ಪಾದರಿಗೆ ಸಲ್ಲುತ್ತದೆ ಎಂದರು. 

ಸಮಾರಂಭಕ್ಕೂ ಮುನ್ನ ಸಂಸ್ಥಾನ ಅರ್ಚಕರಿಂದ ಚಂದ್ರಮೌಳೇಶ್ವರ ಪೂಜೆ, ನಂತರ ಶ್ರೀಗಳಿಂದ ಮಂತ್ರಾಕ್ಷತೆ ವಿತರಣೆ ನಡೆಯಿತು. ನಂತರ ಭಕ್ತರಿಂದ ಪಾದುಕಾ ಪೂಜೆ, ವಸ್ತ್ರ ಸಮರ್ಪಣೆ, ಭಿಕ್ಷಾವಂದನೆ ಸೇವೆಗಳು ಜರುಗಿದವು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ದರ್ಶನಾಶೀರ್ವಾದ ಪಡೆದರು. ಗಂಗಾಧರ ದೇಶಪಾಂಡೆ, ಇನಾಮದಾರ, ಅರುಣ ಸೊಲಾಪುರಕರ, ಡಾ| ಶೈಲೇಶ ದೇಶಪಾಂಡೆ, ರಾಜು ಪದಕಿ, ಸಿದ್ಧಾಂತಿ, ಮಹೇಶ ದೇಶಪಾಂಡೆ, ಶಾಮ ಜೋಶಿ, ಶಂಕರ ಕುಲಕರ್ಣಿ, ವಲ್ಲಭ ಮನಗೂಳಿ, ಪ್ರಕಾಶ ಅಕ್ಕಲಕೋಟ, ಶ್ರೀನಿವಾಸ ಬೆಟಗೇರಿ, ವಿಜಯ ಜೋಶಿ, ಶ್ರೀಹರಿ ಗೊಳಸಂಗಿ ಇದ್ದರು. ಶ್ರೀಮಠದ ಅಧ್ಯಕ್ಷ ಪ್ರದೀಪ ಕುಲಕರ್ಣಿ ಸ್ವಾಗತಿಸಿದರು. ಪ್ರಮೋದ ಅಥಣಿ ಪ್ರಾಸ್ತಾವಿಕ ಮಾತನಾಡಿದರು. ರಾಜು ಪದಕಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next