ಮಂಗಳೂರು: ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ ಆಚಾರ್ಯ ಮಠ ವಠಾರದ ಶ್ರೀ ಶಾರದಾ ಮಹೋತ್ಸವ ಈ ಬಾರಿ ಶತಮಾನೋತ್ಸವ ಆಚರಿಸುತ್ತಿದ್ದು ಹೊರೆಕಾಣಿಕೆಯ ಬೃಹತ್ ಮೆರವಣಿಗೆಯು ರವಿವಾರ ನೆಹರೂ ಮೈದಾನದಿಂದ ಆರಂಭಗೊಂಡಿತು.
ಶಾಸಕ ವೇದವ್ಯಾಸ ಕಾಮತ್ ಮೆರವಣಿಗೆಗೆ ಚಾಲನೆ ನೀಡಿದರು. ಉಪಮೇಯರ್ ಪೂರ್ಣಿಮಾ, ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಂಶುಕುಮಾರ್, ಎಸಿಪಿ (ಟ್ರಾಫಿಕ್) ಗೀತಾ ಕುಲಕರ್ಣಿ ಹಾಜರಿದ್ದರು.
ಮಾಜಿ ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ, ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷ ಡಾ| ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಕೋಶಾಧಿಕಾರಿ ಎಂ. ವಿಠಲ ಆಚಾರ್ಯ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಪಂಡಿತ ನರಸಿಂಹ ಆಚಾರ್ಯ, ಸಮಿತಿಯ ಸಂಚಾಲಕರಾದ ಅರುಣ್ ಪಡಿಯಾರ್, ಗಣೇಶ ಬಾಳಿಗಾ, ಸುಬ್ರಹ್ಮಣ್ಯ ಭಟ್, ವಾಮನ ಪೈ, ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ ಮತ್ತು ಗಣೇಶ್ ಕಾಮತ್ ಹಾಗೂ ಭಕ್ತರು ಭಾಗವಹಿಸಿದ್ದರು.
ಸುಮಾರು 60 ಹೊರೆಕಾಣಿಕೆಯ ವಾಹನಗಳು ಭಾಗವಹಿಸಿದ್ದವು. ಶ್ರೀ ಶಾರದಾ ಮಾತೆಗೆ ಅರ್ಪಿಸುವ ರಜತಪೀಠ, ಪ್ರಭಾವಳಿ, ಸ್ವರ್ಣ ಆರತಿ, ಸ್ವರ್ಣ ನವಿಲು, ಸ್ವರ್ಣ ವೀಣೆ, ಸ್ವರ್ಣ ಕೈಬಳೆ ಇತ್ಯಾದಿಗಳನ್ನು ಭವ್ಯ ಮೆರವಣಿಗೆಯಲ್ಲಿ ತರಲಾಯಿತು. ನರೇಶ್ ಕಿಣಿ ಮತ್ತು ವಿನೋದ್ ಕಾಮತ್ ನಿರೂಪಿಸಿದರು.