ಬ್ರಹ್ಮಾವರ : ನೆಹರು ಯುವ ಕೇಂದ್ರ ಉಡುಪಿ ಮತ್ತು ಶ್ರೀ ಜ್ಞಾನ ಶಕ್ತಿ ಕ್ರೀಡಾ ಮತ್ತು ಕಲಾ ಸಂಘ(ರಿ) ಜಂಟಿ ಆಶ್ರಯದಲ್ಲಿ ಶಾರದಾ ಪ್ರೌಢ ಶಾಲೆ ಚೇರ್ಕಾಡಿಯಲ್ಲಿ ಫೆ.28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದಯವಾಣಿಯ ಪತ್ರಕರ್ತರಾದ ವಿಷ್ಣುದಾಸ್ ಪಾಟೀಲ್ ಗೋರ್ಪಾಡಿ ಉದ್ಘಾಟಿಸಿ ಪರಿಸರ ವಿಜ್ಞಾನದ ಕುರಿತಾಗಿನ ಜಾಗತಿಕ ಸವಾಲುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶ್ರೀ ಜ್ಞಾನ ಶಕ್ತಿ ಕ್ರೀಡಾ ಮತ್ತು ಕಲಾ ಸಂಘದ ಅಧ್ಯಕ್ಷ ಮಂಜುನಾಥ್ ಬಿ.ಶೆಟ್ಟಿಗಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಶಾರದಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ್ ನಾಯ್ಕ್ ಅವರು ಸ್ವಾಗತಿಸಿದರು. ವಿಜ್ಞಾನ ಶಿಕ್ಷಕರಾದ ಜಯಪ್ರಕಾಶ್ ಶೆಟ್ಟಿ ಮತ್ತು ಉಪನ್ಯಾಸಕಿ ನಾಗಲಕ್ಷ್ಮೀ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಜ್ಞಾನದ ಹಲವು ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಚೇರ್ಕಾಡಿ ಗ್ರಾಮ ಪಂಚಾಯತ್ ಪಿಡಿಒ ಸುಭಾಷ್, ರಾಮಕೃಷ್ಣ ಶೆಟ್ಟಿಗಾರ್ ಕಾರ್ಯಕ್ರಮದಲ್ಲಿ ಭಾಗಿಯಾದರು.