Advertisement

ರೈತರು ಅಸಮಾಧಾನಗೊಳ್ಳಲು ಬಿಡಬೇಡಿ: ಕೇಂದ್ರಕ್ಕೆ ಎಚ್ಚರಿಕೆ ನೀಡಿದ ಶರದ್‌ ಪವಾರ್‌

06:42 PM Oct 16, 2021 | Team Udayavani |

ಪುಣೆ:  ಪಂಜಾಬ್‌ನಲ್ಲಿ ರೈತರು ಅಸಮಾಧಾನಗೊಳ್ಳಲು ಬಿಡಬೇಡಿ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರು ಮೋದಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ಶನಿವಾರ ಪಿಂಪ್ರಿ-ಚಿಂಚ್ವಾಡ್‌ನ‌ಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ,  ಪಂಜಾಬ್‌ನ ರೈತರು ದೇಶದ ಆಹಾರ ಪೂರೈಕೆಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ.  ದೇಶದ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಅವರು ಹೇಳಿದರು.

ರೈತರ ಆಂದೋಲನದಲ್ಲಿ ಕೇಂದ್ರ ಸರಕಾರದ ಪಾತ್ರದ ಬಗ್ಗೆ ಪ್ರತಿಕ್ರಿಯಿಸುವಾಗ ಪವಾರ್‌ ಅವರು, ರೈತರ ಚಳವಳಿಯಲ್ಲಿ ಭಾಗವಹಿಸುವವರ ಬಗ್ಗೆ ಕೇಂದ್ರ ಸರಕಾರದ ಪಾತ್ರವು ಸಂವೇದನಾಶೀಲವಾಗಿ ಕಾಣುತ್ತಿಲ್ಲ. ಪಂಜಾಬ್‌, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಹೆಚ್ಚಿನ ಜನರು ಆಂದೋಲನದಲ್ಲಿ ಭಾಗವಹಿಸುತ್ತಿದ್ದಾರೆ. ಪಂಜಾಬ್‌ನಲ್ಲಿ ರೈತರ ಸಂಖ್ಯೆ ಹೆಚ್ಚು. ಆದ್ದರಿಂದ ಪಂಜಾಬ್‌ನ ರೈತರು ಅಸಮಾಧಾನಗೊಳ್ಳದಂತೆ ನಾವು ಕೇಂದ್ರ ಸರಕಾರಕ್ಕೆ ಹೇಳಬೇಕು ಎಂದು ಅವರು ಆಗ್ರಹಿಸಿದರು.

ಪಂಜಾಬ್‌ ಒಂದು ಗಡಿ ರಾಜ್ಯ. ಇದು ವ್ಯತಿರಿಕ್ತ ಪರಿಣಾಮಗಳನ್ನು ಹೊಂದಿದ್ದು, ಗಡಿ ರಾಜ್ಯದ ಬಹುತೇಕ ರೈತರು ಅಸಮಾಧಾನಗೊಂಡಿದ್ದಾರೆ. ಒಮ್ಮೆ ಈ ದೇಶವು ಅಸ್ಥಿರ ಪಂಜಾಬ್‌ಗ  ಬೆಲೆ ನೀಡಿತು. ಇಂದಿರಾ ಗಾಂಧಿ ಹತ್ಯೆಯಾಗುವವರೆಗೂ ನಾವು ಬೆಲೆ ನೀಡಿದ್ದೇವೆ ಎಂದು ಶರದ್‌ ಪವಾರ್‌ ಹೇಳಿದರು.

ಪಂಜಾಬ್‌ನ ರೈತರು ಅವರು ಸಿಖ್ಖರು ಅಥವಾ ಹಿಂದೂಗಳಾಗಿದ್ದರೂ, ಈ ದೇಶದ ಆಹಾರ ಪೂರೈಕೆಗೆ ನಿರಂತರವಾಗಿ ಅಪಾರ ಕೊಡುಗೆ ನೀಡಿದ್ದಾರೆ. ಪಂಜಾಬ್‌ ಪಾಕಿಸ್ತಾನದ ಗಡಿಯಾಗಿದೆ. ಆದ್ದರಿಂದ ಕೆಲವು ವಿಷಯಗಳ ಮೇಲೆ ಒತ್ತಾಯಿಸಿ ಆಂದೋಲನ ನಡೆಯುತ್ತಿದ್ದು, ಆಡಳಿತಗಾರರು ಅದರತ್ತ ಗಮನ ಹರಿಸಬೇಕು. ಇದು ರಾಷ್ಟ್ರೀಯ ಅಗತ್ಯ ಎಂದು ಶರದ್‌ ಪವಾರ್‌ ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next