Advertisement

ಶಾಂತಿನಗರ ಕ್ಷೇತ್ರ ಬದಲಾಗಿದೆ: ಹ್ಯಾರಿಸ್‌

11:49 AM May 01, 2018 | Team Udayavani |

ಬೆಂಗಳೂರು: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಎ.ಹ್ಯಾರಿಸ್‌ ಅವರು ಅಗರಂ ಹಾಗೂ ಶಾಂತಲ ನಗರ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸೋಮವಾರ ಮತ ಯಾಚನೆ ಮಾಡಿದರು.

Advertisement

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿದ ಅವರು, ಹೆಚ್ಚು ಜನ ಸೇರಿದ್ದಕಡೆ ಕಾರ್ನರ್‌ ಮೀಟಿಂಗ್‌ ನಡೆಸಿ ತಮಗೆ ಮತ ನೀಡುವಂತೆ ಕೋರಿದರು. ನಾವು ನುಡಿದಂತೆ ನಡೆದಿದ್ದೇವೆ, ಕೊಟ್ಟ ಭರವಸೆ ಈಡೇರಿಸಿದ್ದೇವೆ. ಕ್ಷೇತ್ರದಲ್ಲೂ ಸಹ ಬದಲಾವಣೆ ತರಲಾಗಿದೆ. ಬಾಕಿ ಉಳಿದಿರುವ ಸಮಸ್ಯೆ ಪರಿಹಾರಕ್ಕೆ ಹಾಗೂ ಮಾದರಿ ಕ್ಷೇತ್ರ ಮಾಡಲು ತಮ್ಮನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಜನರಿಂದ ನಿರೀಕ್ಷೆ ಮೀರಿದ ಸ್ವಾಗತ ಸಿಗುತ್ತಿದೆ. ಕಳೆದ ಬಾರಿಗಿಂತ ಹೆಚ್ಚಿನ ಲೀಡ್‌ ಪಡೆದು ಗೆಲ್ಲುತ್ತೇನೆ. ಕಳೆದ ಹತ್ತು ವರ್ಷಗಳಿಂದ ಜನರೊಂದಿಗಿದ್ದು ಸಣ್ಣ ಪುಟ್ಟ ಸಮಸ್ಯೆಗೂ ಸ್ಪಂದಿಸಿದ್ದೇನೆ. ಈ ಕಾರಣಕ್ಕೆ ಜನರ ಪ್ರೀತಿ ಸಿಗುತ್ತಿದೆ ಎಂದರು.

ತಮ್ಮ ಕ್ಷೇತ್ರದ ಸಮೂಹ ವಸತಿ ಯೋಜನೆಯು ತನ್ನದೇ ಆದ ವಿಶೇಷತೆ ಹೊಂದಿದೆ. ಇಲ್ಲಿ ಎರಡು ಲಿಫ್ಟ್ ಕೂಡಾ ಇದೆ. ವಸತಿ ಸೌಲಭ್ಯದ ಸಮೀಪ ಕಮರ್ಷಿಯಲ್‌ ಪ್ರಾಜೆಕ್ಟ್ ಬರಲಿದೆ. ಶುದ್ಧ ನೀರು ಪೂರೈಕೆ ಘಟಕ ಸಹ ಇರುತ್ತದೆ. ಎಲ್ಲ ರೀತಿಯ ಅಭಿವೃದ್ಧಿಯಾಗಲಿದೆ. ಒಳಚರಂಡಿ, ಕುಡಿಯುವ ನೀರು ಪೂರೈಕೆ ಹೀಗೆ ಎಲ್ಲ ಸೌಲಭ್ಯಗಳು ಇಲ್ಲಿವೆ ಎಂದು ಹೇಳಿದರು.

ಸಮುದಾಯ ಭವನಗಳ ನಿರ್ಮಾಣ, ಮೂಲ ಸೌಕರ್ಯಗಳ ಅಭಿವೃದ್ಧಿ ಯಾವುದೇ ಕ್ಷೇತ್ರದ ಕನಿಷ್ಠ ಅಗತ್ಯ. ಹೀಗಾಗಿ ಇಡೀ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂರು ಕಡೆ ಸಕಲ ಸೌಲಭ್ಯವಿರುವ, ಅತ್ಯಾಧುನಿಕ ಗುಣಮಟ್ಟದ ಸಮುದಾಯ ಭವನಗಳನ್ನು, ಕ್ರೀಡಾ ಸೌಲಭ್ಯವನ್ನು ಕಲ್ಪಿಸಲು ಚಾಲನೆ ನೀಡಲಾಗಿದೆ.

Advertisement

ಅಕ್ಕಿತಿಮ್ಮನಹಳ್ಳಿ, ಆಸ್ಟಿನ್‌ಟೌನ್‌, ಜೋಗುಪಾಳದಲ್ಲಿ ಮೂರು ಕಡೆ ಸಮುದಾಯ ಭವನ ನಿರ್ಮಿಸಲು ಒತ್ತು ನೀಡಲಾಗುತ್ತದೆ. ಅಲ್ಲದೆ, ಆಸ್ಟಿನ್‌ಟೌನ್‌ನಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಅಗತ್ಯಗಳಿಗೆ ಸ್ಪಂದಿಸುವ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಭವನ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಉದ್ದೇಶಿತ ಭವನದಲ್ಲಿ ಒಳಾಂಗಣ ಈಜುಕೊಳ, ಜಿಮ್, ಸ್ಕ್ವಾಶ್‌ ಕೋರ್ಟ್‌, ಬಿಬಿಎಂಪಿ ಕಚೇರಿ, ಶಾಸಕರ ಭವನ, ಒಳಾಂಗಣ ಈಜುಕೊಳ ಇರಲಿದೆ. ಮಹಿಳೆಯರು ಈ ಸೌಲಭ್ಯಗಳನ್ನು ಬಳಕೆ ಮಾಡುವಂತೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗುವುದು. ಎಲ್ಲರೂ ಇದನ್ನು ಬಳಕೆ ಮಾಡಬೇಕು ಎಂದು ನಮ್ಮ ಬಯಕೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next