Advertisement

ಜಿಲ್ಲಾ ಕೋರ್ಟ್‌ ಸಂಕೀರ್ಣಕ್ಕೆ ಶಂಕು

07:45 AM Mar 05, 2019 | |

ದೇವನಹಳ್ಳಿ: ನಗರದ ವಿಜಯಪುರ ರಸ್ತೆಯಲ್ಲಿರುವ ಸರ್ವೆ ನಂ.134ರಲ್ಲಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ, ವಕೀಲರ ಸಂಘದ ವತಿಯಿಂದ ನೂತನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಕ್ಕೆ ಕರ್ನಾಟಕ ಉತ್ಛ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದರು.

Advertisement

ವೇದಿಕೆ ನಿರ್ಮಾಣ ಮಾಡಿದ್ದರೂ ಸಹ ವೇದಿಕೆಯನ್ನು ಮುಚ್ಚಲಾಗಿತ್ತು. ನ್ಯಾಯಮೂರ್ತಿಗಳು ಯಾವುದೇ ರೀತಿಯ ವೇದಿಕೆ ಕಾರ್ಯಕ್ರಮ ಬೇಡವೆಂದು ಹೇಳಿದ್ದರು ಎಂದು ತಿಳಿದುಬಂದಿದೆ. ಹಾಕಿದ್ದ ವೇದಿಕೆಗೆ ಶಾಮಿಯಾನದ ಬಟ್ಟೆಯಲ್ಲಿ ಮುಚ್ಚಲಾಗಿತ್ತು. ಅಲ್ಲಿನ ಅಧಿಕಾರಿಯೊಬ್ಬರು ತಿಂಡಿಗೆ ವೇದಿಕೆ ಹಾಕಲಾಗಿದೆ ಎಂಬ ಹಾರಕೆ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಅಭಿವೃದ್ಧಿ ಪಥ: ಕಾರ್ಯಕ್ರಮದಲ್ಲಿ ನ್ಯಾ.ಎಲ್‌.ನಾರಾಯಣಸ್ವಾಮಿ ಅವರು ಯಾವುದರ ಬಗ್ಗೆಯೂ ಮಾತನಾಡಲಿಲ್ಲ. ಈ ವೇಳೆಯಲ್ಲಿದ್ದ ಸಂಸದ ವೀರಪ್ಪ ಮೊಯ್ಲಿ ಮಾತನಾಡಿ, ದೇವನಹಳ್ಳಿಯಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಜಿಲ್ಲಾ ಸಂಕೀರ್ಣ, ಜಿಲ್ಲಾ ಪಂಚಾಯತ್‌ ಸೇರಿದಂತೆ ಹಲವಾರು ಕಚೇರಿಗಳು ಈ ಸ್ಥಳಕ್ಕೆ ಬಂದಿವೆ. ಅದಕ್ಕೆ ಪೂರಕವಾಗಿ ಜಿಲ್ಲಾ ನ್ಯಾಯಾಲಯ ಸಹ ಬಂದಿದೆ. ಇದರಿಂದ ದೇವನಹಳ್ಳಿ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗಲು ಅನುಕೂಲವಾಗಿದೆ ಎಂದರು.

ನ್ಯಾಯಾಲಯ ಸಂಕೀರ್ಣ: ಸರ್ವೆ ನಂ.134ರಲ್ಲಿ 3.18 ಎಕರೆ ಜಾಗದಲ್ಲಿ 20ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ತಲೆ ಎತ್ತಲಿದೆ. ಇನ್ನು 10 ಎಕರೆ ಜಾಗ ಬೇಕಾಗಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಉತ್ಛ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ, ಆಡಳಿತಾತ್ಮಕ ನ್ಯಾ.ಬಿ.ವಿ.ನಾಗರತ್ನಾ ಅವರ ಸಮ್ಮುಖದಲ್ಲಿ ಶಂಕುಸ್ಥಾಪನೆ ಕಾರ್ಯವನ್ನು ಮಾಡುತ್ತಿದ್ದೇವೆ. ಬೆಂಗಳೂರಿಗೆ ಜಿಲ್ಲಾ ನ್ಯಾಯಾಲಯಗಳಿಗೆ ಹೋಗುವುದು ಸ್ವಲ್ಪ ದಿವಸದಲ್ಲಿಯೇ ತಪ್ಪಲಿದೆ. ಈ ಭಾಗದ ಜನರು ಇದರ ಸದುಪಯೋಗವನ್ನು ಪಡೆಯಬಹುದು ಎಂದು ಹೇಳಿದರು.

ಈ ವೇಳೆ ಉತ್ಛ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪಿ.ಕೃಷ್ಣಭಟ್‌, ಹೆಚ್ಚುವರಿ ಮಹಾ ಪ್ರವರ್ತಕ ಎ.ಎಸ್‌.ಪೊನ್ನಣ್ಣ, ವಕೀಲರ ಸಂಘದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ್‌, ಕರ್ನಾಟಕ ರಾಜ್ಯ ವಕೀಲ ಪರಿಷತ್‌ ಸದಸ್ಯ ಎಸ್‌.ಹರೀಶ್‌, ತಾಲೂಕು ವಕೀಲರ ಸಂಘದ ಅಧ್ಯಕ್ಷ ಬೆ„ರೇಗೌಡ, ಉಪಾಧ್ಯಕ್ಷ ಗೋವಿಂದಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ಪ್ರಭಾಕರ್‌, ಖಜಾಂಚಿ ಎಂ.ಶ್ರೀನಿವಾಸ್‌, ಜಿಲ್ಲಾ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಎಸ್‌.ಎಸ್‌.ದಯಾನಂದ್‌, ತಾಲೂಕು ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next