Advertisement

ಕುಮಾರ ಗುಪ್ತನ ಕಾಲದ ಶಂಖಲಿಪಿ ಶಾಸನ ಉ.ಪ್ರ.ದಲ್ಲಿ ಪತ್ತೆ

08:28 PM Sep 09, 2021 | Team Udayavani |

ಆಗ್ರಾ: ಭಾರತದ ಪುರಾತತ್ವ ಇಲಾಖೆ (ಎಎಸ್‌ಐ) ಮಹತ್ವದ ಸಂಶೋಧನೆಯೊಂದನ್ನು ಮಾಡಿದೆ.

Advertisement

5ನೇ ಶತಮಾನದ ಗುಪ್ತ ಸಾಮ್ರಾಜ್ಯಕ್ಕೆ ಸೇರಿದ ಶಂಖಲಿಪಿ ಶಾಸನವೊಂದನ್ನು ಉತ್ತರಪ್ರದೇಶದ ಎಟಾಹ ಜಿಲ್ಲೆಯ ಬಿಲ್ಸಢ ಎಂಬ ಹಳ್ಳಿಯಲ್ಲಿ ಪತ್ತೆ ಹಚ್ಚಿದೆ. ಇದು ದೇವಸ್ಥಾನದ ಮೆಟ್ಟಿಲೊಂದರಲ್ಲಿ ಕಂಡಿದೆ.

ಎಎಸ್‌ಐನಿಂದ ಸಂರಕ್ಷಿಸಲ್ಪಡುತ್ತಿರುವ ಈ ದೇವಸ್ಥಾನವನ್ನು ಸ್ವಚ್ಛ ಮಾಡುವಾಗ ಈ ಅಪರೂಪದ ಲಿಪಿ ಕಾಣಿಸಿದೆ. ಅದರಲ್ಲಿ ಶ್ರೀ ಮಹೇಂದ್ರಾ ದಿತ್ಯ ಎಂದು ಬರೆಯಲಾಗಿದೆ. ಅದು ಆ ಕಾಲದ ಗುಪ್ತ ಚಕ್ರವರ್ತಿ ಕುಮಾರಗುಪ್ತನಿಗೆ ಸೇರಿದೆ ಎಂದು ಎಎಸ್‌ಐ ತಿಳಿಸಿದೆ.

ಈ ಲಿಪಿಗೊಂದು ವಿಶೇಷವಿದೆ. ಅದರಲ್ಲಿನ ಅಕ್ಷರಗಳು ಶಂಖವನ್ನು ಹೋಲುತ್ತವೆ. ಇದು ಬ್ರಾಹ್ಮೀ ಲಿಪಿಯಿಂದ ಬಂದಿರಬಹುದೆಂದು ಅಂದಾಜಿಸಲಾಗಿದೆ. ಕುಮಾರ ಗುಪ್ತನ ಕಾಲಕ್ಕೆ ಸೇರಿದ ಕಲ್ಲಿನ ಕುದುರೆಯೊಂದರಲ್ಲೂ ಇಂತಹದ್ದೇ ಶಾಸನ ಈ ಹಿಂದೆ ಪತ್ತೆಯಾಗಿತ್ತು.

ಇದನ್ನೂ ಓದಿ:ನೀಟ್ ಪರೀಕ್ಷೆ ಹಿನ್ನೆಲೆ: ಹುಬ್ಬಳ್ಳಿ- ಗಂಗಾವತಿ ರೈಲು ಸಂಚಾರ ಸಮಯ ಬದಲಾವಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next