Advertisement
ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಬಿಸಿಲಿನ ನಡುವೆ ಹೇರಳವಾಗಿ ಬೆಳೆದು ಪಾತಾಳಕ್ಕೆ ಕುಸಿದಿದ್ದ ಶಂಕರಪುರ ಮಲ್ಲಿಗೆ ದರ ಮೂರನೇ ವಾರದಲ್ಲಿ ಗಗನಕ್ಕೇರಿತ್ತು. ಸಾಧಾರಣ ಬೇಡಿಕೆಯಿಂದಾಗಿಜುಲೈ ತಿಂಗಳಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು.ಮಳೆಗೆ ಹಾಳಾದ ಮೊಗ್ಗು ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಗೆ ಮೊಗ್ಗು ಹಾಳಾಗಿವೆ. ಬುಡದಲ್ಲಿ ಪಾಚಿ ಬೆಳೆದು ಬಿಸಿಲಿನ ತಾಪವಿಲ್ಲದೆ ಗಿಡ ಚಿಗುರೊಡೆಯುವುದಿಲ್ಲ. ಬಿಸಿಲು ಇಲ್ಲದಿದ್ದರೆ ಮಲ್ಲಿಗೆ ಹೂಗಿನ ಮೊಗ್ಗುಗಳು ಕೊಳೆತು ಹಾಳಾಗಿ ಇಳುವರಿ ಕಡಿಮೆಯಾಗುತ್ತದೆ. ಜತೆಗೆ ಗಿಡಕ್ಕೆ ಬರುವ ಕೀಟ ಮತ್ತು ರೋಗಬಾಧೆಯಿಂದ ಗಿಡಗಳು ನಾಶವಾಗುತ್ತವೆ. ಬೆಳೆ ಕಡಿಮೆಯಾದ್ದರಿಂ ಮಾರುಕಟ್ಟೆಗೆ ಬರುವ ಹೂವಿನ ಪ್ರಮಾಣವೂ ಕಡಿಮೆಯಾಗಿದೆ. ಅಲ್ಲದೆ ಶುಭ ಸಮಾರಂಭಗಳು ಪ್ರಾರಂಭವಾಗಿ ಬೇಡಿಕೆ ಹೆಚ್ಚಾಗಿ ಮಲ್ಲಿಗೆ ದರ ಏರಲು ಕಾರಣವಾಗಿದೆ.
ಶಂಕರಪುರ ಮಲ್ಲಿಗೆ ಬೆಳೆಗೆ ಮಳೆಗಾಲದಲ್ಲಿ ಮಲಿcಂಗ್ ಶೀಟ್ ಅಳವಡಿಸಿ ಕಳೆ ಮತ್ತು ಕೀಟ ಬಾಧೆಯಿಂದ ರಕ್ಷಿಸಿ ಉತ್ತಮ ಬೆಳೆ ತೆಗೆಯುವ ಪ್ರಯತ್ನದಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ಪ್ರಗತಿಪರ ಕೃಷಿಕ ಕಲ್ಲೊಟ್ಟು ರಾಘವೇಂದ್ರ ನಾಯಕ್ ಸಫಲತೆ ಕಂಡಿದ್ದಾರೆ. ಭಾರೀ ಮಳೆಯ ನಡುವೆಯೂ ಅವರು ದಿನಕ್ಕೆ 6 ಚೆಂಡು ಹೂವಿನ ಇಳುವರಿ ತೆಗೆಯುತ್ತಾರೆ. ಹೊದಿಕೆ ಅಳವಡಿಕೆಯಿಂದ ರಕ್ಷಣೆ
ಹೊದಿಕೆ ಅಳವಡಿಸುವುದರಿಂದ ಮಳೆಗಾಲದಲ್ಲಿ ಬರುವ ಕೀಟಬಾಧೆ, ಶಿಲೀಂಧ್ರ ಬಾಧೆ ಮತ್ತು ಕಳೆಗಳಿಂದ ಮಲ್ಲಿಗೆ ಗಿಡಗಳನ್ನು ರಕ್ಷಿಸಲು ಸಹಕಾರಿಯಾಗಿದೆ. ಮೊಗ್ಗು ಹಾಳಾಗದೆ ಉತ್ತಮ ಗುಣಮಟ್ಟದ ಮಲ್ಲಿಗೆ ಸಿಗುತ್ತದೆ .
– ರಾಘವೇಂದ್ರ ನಾಯಕ್, ಮಲ್ಲಿಗೆ ಬೆಳೆಗಾರ