Advertisement
ನವರಾತ್ರಿಯ ಬಳಿಕ ಬೇಡಿಕೆ ಕಡಿಮೆಯಾಗಿ ಇಳಿಕೆಯಾಗಿದ್ದ ಶಂಕರಪುರ ಮಲ್ಲಿಗೆಯ ದರದಲ್ಲಿ ದೀಪಾವಳಿ ಹಬ್ಬದೊಂದಿಗೆ ಮದುವೆ ಇನ್ನಿತರ ಶುಭ ಸಮಾರಂಭಗಳು ಪ್ರಾರಂಭವಾಗಿ ಭಾರೀ ಏರಿಕೆ ಕಂಡಿತ್ತು. ಅ. 31ರಿಂದ ನ. 3ರ ವರೆಗೆ 1,250 ರೂ. ಇದ್ದ ದರ ಇಳಿಕೆಯಾಗಿ ನ. 5ರಂದು 630 ರೂ. ತಲುಪಿತ್ತು. ಬಳಿಕ ಏರಿಕೆ ಕಂಡು ನ.8 ಮತ್ತು 9ರಂದು 1,250 ರೂ. ದರವಿತ್ತು.
ಸಾಮಾನ್ಯವಾಗಿ ಜಾಜಿ ಹೂವಿನ ದರ ನವರಾತ್ರಿಯ ಬಳಿಕ ಕಡಿಮೆಯಾಗಿ ದೀಪಾವಳಿ ಹಬ್ಬದ ಒಂದೆರಡು ದಿನ ಮಾತ್ರ ಉತ್ತಮವಿರುತ್ತದೆ. ಆದರೆ ಈ ಬಾರಿಯ ವಿಪರೀತ ಮಳೆಯಿಂದಾಗಿ ಮಲ್ಲಿಗೆಯ ಇಳುವರಿ ಕಡಿಮೆಯಾಗಿ ಜಾಜಿಯ ದರ ಏರಿಕೆ ಕಂಡಿತ್ತು. ಸೀಸನ್‌ನಲ್ಲಿ ಅ. 6 ಮತ್ತು ನ. 2ರಂದು ಜಾಜಿ ಅಟ್ಟೆಗೆ 850 ರೂ. ಬಂಪರ್ ದರವಿತ್ತು. ರವಿವಾರ 220 ರೂ.ಗೆ ತಲುಪಿದೆ. ಮಳೆಯಿಂದ ಹಾಳಾಗಿ, ಬಿಸಿಲಿಗೆ ಚಿಗುರೊಡೆದ ಗಿಡಗಳು ಚಳಿಗೆ ಮತ್ತಷ್ಟು ಹಾಳಾಗಲಿದ್ದು, ಈ ಬಾರಿ ಮಲ್ಲಿಗೆ ದುಬಾರಿಯಾಗಬಹುದು ಎಂದು ಶಿರ್ವದ ಮಲ್ಲಿಗೆ ವ್ಯಾಪಾರಿ, ಕೃಷಿಕ ವಿಲಿಯಂ ಮಚಾದೋ ಅಭಿಪ್ರಾಯಪಟ್ಟಿದ್ದಾರೆ.