Advertisement

ಕೊರೊನಾ ಮುಕ್ತ ಜಿಲ್ಲೆಗೆ ಪಣ: ಶಂಕರ್‌

04:30 PM May 29, 2021 | Team Udayavani |

ಶಹಾಪುರ: ಯಾದಗಿರಿಯನ್ನು ಕೋವಿಡ್‌ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡಲಾಗಿದ್ದು, ಅದರಂತೆ ಎಲ್ಲ ಇಲಾಖೆ ಅ ಧಿಕಾರಿ ಮತ್ತು ಸಿಬ್ಬಂದಿ ವರ್ಗ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಶಂಕರ್‌ ತಿಳಿಸಿದರು.

Advertisement

ನಗರದ ಕೃಷಿ ಮಾರುಕಟ್ಟೆಯಲ್ಲಿ ಶುಕ್ರವಾರ ಸಂಚಾರಿ ವ್ಯಾಕ್ಸಿನ್‌ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ತಿಂಗಳಿಂದ ಎರಡನೇ ಅಲೆ ಕೊರೊನಾ ತೀವ್ರತೆ ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಗೊಳಿಸಲಾಗಿತ್ತು. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ ದಿನಕ್ಕೆ 500 ರಿಂದ 700 ಗಡಿ ದಾಟಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಸಮರ್ಪಕ ಲಾಕ್‌ ಡೌನ್‌ ವ್ಯವಸ್ಥೆಯಿಂದಾಗಿ ಇದೀಗ ಸೋಂಕಿತರ ಸಂಖ್ಯೆ 200ಕ್ಕೆ ಇಳಿದಿದ್ದು, ಜಿಲ್ಲಾ ಮತ್ತು ಆಯಾ ತಾಲೂಕು ಆಡಳಿತ, ಎಲ್ಲ ಕ್ಷೇತ್ರದ ಶಾಸಕರು ಹಾಗೂ ಸಂಸದರು ಸೇರಿದಂತೆ ಆರೋಗ್ಯ, ಪೊಲೀಸ್‌, ಕಂದಾಯ ಇಲಾಖೆ ಅ ಧಿಕಾರಿಗಳ ಪರಿಶ್ರಮ ಮತ್ತು ಪತ್ರಕರ್ತರು ಇತರೆ ಇಲಾಖೆ ನೌಕರರ ಸಹಕಾರದಿಂದ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿರುವುದು ಸಮಾಧಾನಕರ ಎಂದರು. ಕೊರೊನಾದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿದ್ದು, ಜೂ.7ರೊಳಗೆ ಕೊರೊನಾ ನಿಯಂತ್ರಣಕ್ಕೆ ಬರಲಿದೆ.

ನಂತರ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಲಾಗುವುದು. ಕೊರೊನಾ ಸಂಕಷ್ಟ ಕಾಲದಲ್ಲಿ ಪಕ್ಷ ಭೇದ ಮರೆತು ಜನಪ್ರತಿನಿಧಿ ಗಳು ಮತ್ತು ಅಧಿ ಕಾರಿಗಳ ಸಹಕಾರ ಮನೋಭಾವದೊಂದಿಗೆ ಪ್ರಗತಿ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಈರಣ್ಣ ಸಾಹು ಮೊದಲಿಗೆ ಸಂಚಾರಿ ಬಸ್‌ನಲ್ಲಿ ವ್ಯಾಕ್ಸಿನ್‌ ಪಡೆದರು.

ನಗರದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಅಂಗವಿಕಲರಿಗಾಗಿ ನಿರ್ಮಿಸಲಾದ ವಿಶೇಷ ಲಸಿಕಾ ಕೇಂದ್ರ ಸಚಿವರು ಉದ್ಘಾಟಿಸಿದರು. ಈ ವೇಳೆ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ಗುರು ಪಾಟೀಲ್‌ ಶಿರವಾಳ, ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ, ಎಸ್ಪಿ ಸಿ.ಬಿ. ವೇದಮೂರ್ತಿ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಡಿಎಚ್‌ಒ ಡಾ| ಇಂದುಮತಿ ಕಾಮಶೆಟ್ಟಿ, ಎಸಿ ಶಂಕರಗೌಡ ಸೋಮನಾಳ, ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ, ಟಿಎಚ್‌ಒ ಡಾ| ರಮೇಶ ಗುತ್ತೇದಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next