ಲಂಡನ್: ಐಸಿಸ್ ಉಗ್ರ ಸಂಘಟನೆಯ ತತ್ವಗಳಿಗೆ ಮರುಳಾಗಿ ಸೇರ್ಪಡೆಯಾಗಿದ್ದ ಶಮೀಮಾ ಬೇಗಂ (22) ಎಂಬ ಮಹಿಳೆ ತಾನು ಮುಗ್ಧೆ ಎಂದು ಅಲವತ್ತು ಕೊಳ್ಳಲಾರಂಭಿಸಿದ್ದಾಳೆ.
ತನ್ನ ವಿರುದ್ಧ ಇರುವ ಆರೋಪಗಳು ಸುಳ್ಳು ಮತ್ತು ಬ್ರಿಟನ್‌ನ ಕೋರ್ಟ್‌ನಲ್ಲಿ ತನ್ನ ವಿರುದ್ಧ ವಿಚಾರಣೆ ನಡೆಯಲಿ. ಆ ಮೂಲಕ ತನ್ನ ನಿರಪಾಧಿತ್ವ ಸಾಬೀತಾಬೇಕು ಎಂದು ಒತ್ತಾಯಿಸಿದ್ದಾಳೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವಳು, ತಾನು ಯಾವುದೇ ಉಗ್ರ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂದಿದ್ದಾಳೆ. ಹೋದಾ ಮುತಾನಾ ಎಂಬ ಅಮೆರಿಕ ಮೂಲದ ವ್ಯಕ್ತಿಗೆ ಮರುಳಾಗಿ ಮದುವೆಯಾಗಿದ್ದ ತಾನು ಕೇವಲ ಆತನ ಪತ್ನಿಯಾಗಿ ಉಳಿದಿದ್ದೆ ಎಂದು ಅಲವತ್ತುಕೊಂಡಿದ್ದಾಳೆ. ಈಗ ತನ್ನ ತಪ್ಪಿನ ಅರಿವಾಗಿದೆ. ಸಿರಿಯಾದಲ್ಲಿದ್ದ ವೇಳೆ ಉಗ್ರ ಕೃತ್ಯ ನಡೆಸಿಲ್ಲ. ಅದಕ್ಕಾಗಿ ತನ್ನನ್ನು ತಾನು ದ್ವೇಷಿಸಿಕೊಂಡಷ್ಟು ಮತ್ಯಾರೂ ನನ್ನನ್ನು ದ್ವೇಷಿಸಲಾರಳು. ಹಾಗಾಗಿ, ನನಗೆ ಬ್ರಿಟನ್‌ನಲ್ಲಿ ನನ್ನ ಹಳೆಯ ಜೀವನ ಪುನರಾರಂಭಿಸಲು ಮತ್ತೂಂದು ಅವಕಾಶ ಕಲ್ಪಿಸಬೇಕು ಎಂದು ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ.
ಇದನ್ನೂ ಓದಿ:ಶಮಿಮಾ ಬೇಗಂ ಹೇಳಿಕೆ ನಾಟಕೀಯ; ಸಾಜಿದ್ ಜಾವೇದ್ ಅಭಿಪ್ರಾಯ
ಗೊತ್ತಿರಲಿಲ್ಲ: ಐಸಿಸ್ ಎನ್ನುವುದು ಉಗ್ರ ಸಂಘಟನೆ. ಅವರಿಗೆ ಮರಣವೇ ಅತ್ಯಂತ ಪ್ರಿಯವಾದ ವಿಚಾರ ಎಂಬ ಅಂಶ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಮುಸ್ಲಿಮರ ಸಂಘಟನೆ ಎಂಬ ಕಾರಣಕ್ಕಾಗಿ ಮಾತ್ರ ಅದಕ್ಕೆ ಸೇರಿಕೊಂಡೆ ಎಂದು ಶಮೀಮ್ ಹೇಳಿಕೊಂಡಿದ್ದಾಳೆ. ಬಾಂಗ್ಲಾದೇಶ ಮೂಲದ ಆಕೆ, ಮರಳಿ ಸ್ವದೇಶಕ್ಕೆ ಏಕೆ ಹೋಗುವುದಿಲ್ಲ ಎಂದು ಪ್ರಶ್ನಿಸಿದಾಗ ಅಲ್ಲಿಗೆ ಹೋದರೆ, ನನಗೆ ಗಲ್ಲು ಶಿಕ್ಷೆ ವಿಧಿಸುವ ಭೀತಿ ಇದೆ ಎಂದಿದ್ದಾಳೆ.
ಆದರೆ ಈ ಹೇಳಿಕೆಯನ್ನು ಬ್ರಿಟನ್‌ನ ಮಾಜಿ ಗೃಹ ಸಚಿವ ಸಾಜಿದ್ ಜಾವೇದ್ ತಿರಸ್ಕರಿಸಿದ್ದಾರೆ. ಶಮಿಮಾ ಮನ ಪರಿವರ್ತನೆಯಾಗಿದೆ ಎಂದು ನಾಟಕೀಯ ಹೇಳಿಕೆ ನೀಡುತ್ತಿದ್ದಾಳೆ ಎಂದು ಅವರು ಹೇಳಿದ್ದಾರೆ.