Advertisement
ಮುಂಬರುವ ಏಕದಿನ ಸರಣಿ, ಅನಂತರದ ಐಪಿಎಲ್, ವರ್ಷಾಂತ್ಯದ ಏಕದಿನ ವಿಶ್ವಕಪ್ಗ್ಳೆಲ್ಲದರಲ್ಲೂ ಪಾಲ್ಗೊಳ್ಳುವ ಸಂಭಾವ್ಯ ಪೇಸ್ ಬೌಲರ್ಗಳಿಗೆ ಆಗಾಗ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯಕೀಯ ತಂಡ ಸೂಚನೆ ನೀಡಿತ್ತು. ಈ ಕಾರಣಕ್ಕಾಗಿ ಮೊಹಮ್ಮದ್ ಶಮಿ ಅವರನ್ನು ಇಂದೋರ್ ಟೆಸ್ಟ್ನಿಂದ ಕೈಬಿಟ್ಟು ಉಮೇಶ್ ಯಾದವ್ಗೆ ಅವಕಾಶ ನೀಡಲಾಯಿತು. ಮುಂದಿನ ಪಂದ್ಯದಲ್ಲಿ ಯಾದವ್ ಅವರನ್ನು ಉಳಿಸಿಕೊಂಡು ಸಿರಾಜ್ಗೆ ವಿಶ್ರಾಂತಿ ನೀಡುವುದು ತಂಡದ ಯೋಜನೆಯಾಗಿದೆ ಎಂದು ತಿಳಿದು ಬಂದಿದೆ.ಮೊದಲ ಮೂರೂ ಟೆಸ್ಟ್ಗಳನ್ನು ಆಡಿರುವ ಸಿರಾಜ್ಗೆ ಲಭಿಸಿದ್ದು 24 ಓವರ್ ಮಾತ್ರ.