ದಾವಣಗೆರೆ: ಕನ್ನಡ ಪರ ಹೋರಾಟಗಾರ ದಿ| ಮು. ಗೋವಿಂದರಾಜ್‌ರವರ ಭಾವಚಿತ್ರಕ್ಕೆ ಅಪಮಾನ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ. ನಾರಾಯಣ ಗೌಡ ಬಣ) ಕಾರ್ಯಕರ್ತರು ನಗರ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ದಾವಣಗೆರೆಯ ಡಾ| ಮೋದಿ ವೃತ್ತದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ನಲ್ಲಿದ್ದ ಮು. ಗೋವಿಂದರಾಜ್‌ರವರ ಭಾವಚಿತ್ರ ಕಿತ್ತು ಹಾಕುವ ಮೂಲಕ ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ. ಶೀಘ್ರವೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಬಂಧಿಸಿ, ಸೂಕ್ತ ಶಿಕ್ಷೆಗೆ ಒಳಪಡಿಸಬೇಕು ಎಂದು ವೇದಿಕೆ ಮುಖಂಡರು, ಪದಾಧಿಕಾರಿಗಳು ಒತ್ತಾಯಿಸಿದರು.
ಹಿರಿಯ ಹೋರಾಟಗಾರರು, ದೇಶಭಕ್ತರು, ಕನ್ನಡನಾಡಿಗೆ ಹೋರಾಡಿದವರು, ಪ್ರಾಣಾರ್ಪಣೆ ಮಾಡಿದವರು, ಹಲವಾರು ಹೋರಾಟಗಾರರ ಭಾವಚಿತ್ರಗಳು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ಹಾಕಿರುವ ಮೋದಿ ವೃತ್ತದಲ್ಲಿ ಅಳವಡಿಸಲಾಗಿದೆ. ಕೆಲವು ಕಿಡಿಗೇಡಿಗಳು ನಾಡದ್ರೋಹಿಗಳು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಲೆಕೊಟ್ಟು ಕನ್ನಡಕ್ಕಾಗಿ ತಮ್ಮ° ಪ್ರಾಣವನ್ನೇ ಬಲಿದಾನ ನೀಡಿರುವಂತಹ ಮು. ಗೋವಿಂದರಾಜ್‌ರವರ ಭಾವಚಿತ್ರವನ್ನು ಹರಿದುಹಾಕಿದ್ದಾರೆ.
ಅಶಾಂತಿ ಉಂಟು ಮಾಡುಂತವರನ್ನು ತಕ್ಷಣ ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು. ಇಲ್ಲವಾದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ, ಕೆ.ಜಿ. ಬಸವರಾಜ್, ಸಂತೋಷ್, ಮಹೇಶ್ವರಪ್ಪ, ಮಂಜುಳ ಮಾಂತೇಶ್, ಸಾಕಮ್ಮ, ಎಂ.ಡಿ. ರμàಕ್, ಜಬೀವುಲ್ಲಾ, ಅಯೂಬ್,ಪರಮೇಶ್, ಬಸವರಾಜು, ಇಬ್ರಾಹಿಂ,ಸಂಜು,ಇತರರು ಇದ್ದರು.