Advertisement

ಕೊಹ್ಲಿಯನ್ನು ಜಾಡಮಾಲಿ ಎಂದ ಪತ್ರಕರ್ತನ ವಿರುದ್ಧ ಹರಿಹಾಯ್ದ ಭಜ್ಜಿ

07:05 AM Sep 16, 2017 | Team Udayavani |

ಹೊಸದಿಲ್ಲಿ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಜಾಡಮಾಲಿ (ಸ್ವೀಪರ್‌) ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ ಆಸ್ಟ್ರೇಲಿಯದ ಪತ್ರಕರ್ತ ಡೆನ್ನಿಸ್‌ ಫ್ರೀಡ್‌ಮ್ಯಾನ್‌ ವಿರುದ್ಧ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಹರಿಹಾಯ್ದಿದ್ದಾರೆ. ಜತೆಗೆ ಭಾರತ, ಪಾಕಿಸ್ಥಾನ ಕ್ರಿಕೆಟ್‌ ಅಭಿಮಾನಿಗಳೂ ಫ್ರೀಡ್‌ಮ್ಯಾನ್‌ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೀಳಿಗೆಯ ಶ್ರೇಷ್ಠ ಕ್ರಿಕೆಟಿಗನೊಬ್ಬನನ್ನು ಹೀಯಾಳಿಸಲು ನಿಮಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

Advertisement

ಸ್ವತ್ಛ ಭಾರತ ಅಭಿಯಾನದಡಿ ವಿರಾಟ್‌ ಕೊಹ್ಲಿ ಪೊರಕೆ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಕಸ ಗುಡಿಸುತ್ತಿದ್ದ ಚಿತ್ರವೊಂದನ್ನು ಬಳಸಿಕೊಂಡ ಫ್ರೀಡ್‌ಮ್ಯಾನ್‌, ಕೊಹ್ಲಿಯನ್ನು ಸ್ವೀಪರ್‌ ಎಂಬ ರೀತಿಯಲ್ಲಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಹರ್ಭಜನ್‌ ಸಿಂಗ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

“ಇಂಥದೊಂದು ಕೀಳು ಮಟ್ಟದ ವರ್ತನೆಗೆ ನಾಚಿಕೆಯಾಗಬೇಕು! ಕೊಹ್ಲಿ ಕುರಿತಾಗಲಿ, ಬೇರೆ ಯಾರದೇ ಕುರಿತಾಗಲಿ, ಈ ರೀತಿ ಬರೆಯುವುದು ಬುದ್ಧಿಗೇಡಿ ವರ್ತನೆ. ಮನುಷ್ಯರೆಲ್ಲರನ್ನೂ ಅವರವರ ರಾಷ್ಟ್ರೀಯತೆಯನ್ನು ಮೀರಿ ಗೌರವಿಸುವುದನ್ನು ಕಲಿಯಬೇಕಿದೆ. ಆದರೆ ಇದಕ್ಕೆ ವಿರಾಟ್‌ ಕೊಹ್ಲಿ ಪ್ರತಿಕ್ರಿಯಿಸಬೇಕಾದ ಅಗತ್ಯ ಖಂಡಿತ ಇಲ್ಲ. ಆನೆಯೊಂದು ಬೀದಿಯಲ್ಲಿ ನಡೆದುಕೊಂಡು ಹೋಗುವಾಗ ನಾಯಿಗಳು ಬೊಗಳುವುದು ಸಹಜ…’ ಎಂದು ಭಜ್ಜಿ ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ಫ್ರೀಡ್‌ಮ್ಯಾನ್‌ ಅವರನ್ನು ಜಾಲಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next