Advertisement

ಭಾರತ-ಚೀನಾ ಗಡಿಯಲ್ಲಿ ”ಶಂಭೋ ಶಿವ ಶಂಕರ”ಹಾಡು

03:44 PM Dec 18, 2021 | Team Udayavani |

ಅಘನ್ಯ ಪಿಕ್ಚರ್ ಮೂಲಕ ವರ್ತೂರು ಮಂಜು ಈ ಚಿತ್ರವನ್ನು ನಿರ್ಮಿಸುತ್ತಿರುವ, ಶಂಕರ್‌ ಕೋನಮಾನಹಳ್ಳಿ ನಿರ್ದೇಶನದ “ಶಂಭೋ ಶಿವ ಶಂಕರ’ ಚಿತ್ರದ ಚಿತ್ರೀಕರಣ ಹಾಡಿನೊಂದಿಗೆ ಮುಕ್ತಾಯವಾಗಿದೆ.

Advertisement

ಚಿತ್ರದಲ್ಲಿ ಅಭಯ್‌ ಪುನೀತ್‌ ನಾಯಕರಾಗಿ ನಟಿಸಿದ್ದಾರೆ. ಇವರಿಗೆ ಸೋನಾಲ್‌ ಮೊಂತೆರೋ ನಾಯಕಿ. ಸದ್ಯ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಈ ಡಬ್ಬಿಂಗ್‌ ಹಂತದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

ಗೌಸ್‌ ಫೀರ್‌ ಬರೆದಿರುವ ಹಾಡೊಂದರ ಚಿತ್ರೀಕರಣ ಮೈನಸ್‌ ಹತ್ತಕ್ಕೂ ಕಡಿಮೆ ಉಷ್ಣಾಂಶವಿರುವ ಭಾರತ-ಚೀನಾ ಗಡಿಯ ಲಾಹೌಲ್‌ ಸ್ಪಿಟಿ ಎಂಬ ಸ್ಥಳದಲ್ಲಿ ನಾಲ್ಕು ದಿನಗಳ ಕಾಲ 30 ಲಕ್ಷಕ್ಕೂ ಅಧಿಕ ಬಜೆಟ್‌ನಲ್ಲಿ ಚಿತ್ರೀಕರಿಸಲಾ ಗಿದೆ.ಕಲೈ ಮಾಸ್ಟರ್‌ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿಗೆ ನಾಯಕ ಅಭಯ್‌ ಪುನೀತ, ನಾಯಕಿ ಸೋನಾಲ್‌ ಮೊಂತೆರೋ ಹೆಜ್ಜೆ ಹಾಕಿದ್ದಾರೆ.

ಸುಮಾರು ಮೂವತ್ತು ಲಕ್ಷಕ್ಕೂ ಅಧಿಕವೆಚ್ಚದಲ್ಲಿ, ಅದ್ಧೂಯಾಗಿ ಮೂಡಿ ಬಂದಿರುವ ಈ ಹಾಡಿನೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎನ್ನುತ್ತಾರೆ ನಿರ್ದೇಶಕರು.

ಇದನ್ನೂ ಓದಿ:ಸಂಗೊಳ್ಳಿ ರಾಯಣ್ಣಗೆ ಅಪಮಾನ: ಕಠಿಣ ಶಿಕ್ಷೆಗೆ ನಟ ದರ್ಶನ್ ಆಗ್ರಹ

Advertisement

ಚಿತ್ರದಲ್ಲಿ ನಾಯಕ ಅಭಯ್‌ ಪುನೀತ್‌ ಜೊತೆಗೆ ಸುಪ್ರಿಂ ಹೀರೋ ಶಶಿಕುಮಾರ್‌, ಸೋನಾಲ್‌ ಮಾಂತೆ ರೋ, ಜೊಗಿ ನಾಗರಾಜ್‌, ಪ್ರದೀಪ್‌ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್‌, ಡಿ.ಸಿ.ತಮ್ಮಣ್ಣ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಚಿತ್ರಕ್ಕೆ ಹಿತನ್‌ ಹಾಸನ್‌ ಸಂಗೀತ ಹಾಗೂ ಧರ್ಮ ವಿಶ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ನಟರಾಜ್‌ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ಡಿಫ‌ರೆಂಟ್‌ ಡ್ಯಾನಿ ಸಾಹಸ ನಿರ್ದೇಶನ ಹಾಗೂ ವೆಂಕಟೇಶ್‌ ಯುಡಿವಿ ಅವರ ಸಂಕಲವಿದೆ.

Advertisement

Udayavani is now on Telegram. Click here to join our channel and stay updated with the latest news.

Next