Advertisement

Shambhur: ಯಕ್ಷಗಾನ ಸುವರ್ಣ ಸಂಭ್ರಮ ಸಮ್ಮಾನ, ಬೊಂಡಾಲ ಪ್ರಶಸ್ತಿ ಪ್ರದಾನ

11:01 PM Feb 16, 2024 | Team Udayavani |

ಬಂಟ್ವಾಳ: ಶಂಭೂರು ಬೊಂಡಾಲ ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ ವತಿಯಿಂದ ಯಕ್ಷಗಾನ ಬಯಲಾಟದ ಸುವರ್ಣ ಸಂಭ್ರಮದಲ್ಲಿ ಗುರುವಾರ ರಾತ್ರಿ ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ, ಸಾಲಿಗ್ರಾಮ ಮೇಳದ ಸಂಚಾಲಕ ಪಳ್ಳಿ ಕಿಶನ್‌ ಹೆಗ್ಡೆ ಅವರಿಗೆ ಸಮ್ಮಾನ ಹಾಗೂ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಮರಣೆ ಹಿನ್ನೆಲೆಯಲ್ಲಿ ಕಟೀಲು ಮೇಳದ ಕಲಾವಿದ ಮೋಹನ ಕುಮಾರ್‌ ಅಮ್ಮುಂಜೆ ಅವರಿಗೆ ಬೊಂಡಾಲ ಪ್ರಶಸ್ತಿ- 2024 ಪ್ರದಾನ ಮಾಡಲಾಯಿತು.

Advertisement

ಪ್ರಶಸ್ತಿ ಪ್ರದಾನ ಮಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಮಾತ ನಾಡಿ, ಕಂಬಳ, ಯಕ್ಷಗಾನ ಕರಾವಳಿ ಭಾಗದ ಎರಡು ಕಣ್ಣುಗಳಾಗಿವೆ. ಯಕ್ಷಗಾನ ಕ್ಷೇತ್ರದ ಅಭ್ಯುದಯಕ್ಕೆ ಅಕಾಡೆಮಿಯ ಬದಲು ಪ್ರಾಧಿಕಾರ ಬೇಕು ಎನ್ನುವ ಬೇಡಿಕೆಯಿದ್ದು, ಅದರ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಂಭೂರಿಗೆ ಸರಕಾರಿ ಶಾಲೆ ತರುವಲ್ಲಿ ದಿ| ಬೊಂಡಾಲ ಜಗನ್ನಾಥ ಶೆಟ್ಟಿ ಅವರ ಪ್ರಯತ್ನ ಸ್ಮರಣೀಯ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಕಟೀಲಿನ ಯಕ್ಷಗಾನ ಆಡಿಸಿದಲ್ಲಿ ದೇವಿಯೇ ಕುಣಿಯುತ್ತಾಳೆ ಎಂಬ ನಂಬಿಕೆ ಇದ್ದು, ಕಳೆದ 50 ವರ್ಷಗಳಿಂದ ಇಲ್ಲಿ ತಾಯಿ ಭಕ್ತರನ್ನು ಹರಸುವ ಕಾರ್ಯ ಮಾಡಿದ್ದಾಳೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಬೊಂಡಾಲದಲ್ಲಿ ಯಕ್ಷಗಾನ ಸೇವೆಯ ಜತೆಗೆ ಪ್ರತೀ ವರ್ಷವೂ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ಯಕ್ಷಗಾನಕ್ಕೆ ಗೌರವ ನೀಡುವ ಕಾರ್ಯ ನಡೆಯುತ್ತಿದೆ ಎಂದರು.

ಸಮ್ಮಾನ: ಸೇವಾ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಹಾಗೂ ಬೊಂಡಾಲ ಕುಟುಂಬಸ್ಥರನ್ನು ಸಮ್ಮಾನಿಸಲಾಯಿತು. ಯಕ್ಷಗಾನಕ್ಕೆ ಸಹಕರಿಸುತ್ತಿ ರುವ ವಾಸುದೇವ ಕಾರಂತ ನರಿಕೊಂಬು, ಸುವರ್ಣ ಸಂಭ್ರಮದ ಕಾರ್ಯಾಧ್ಯಕ್ಷ ಪದ್ಮನಾಭ ಮಯ್ಯ ಏಲಬೆ ಅವರನ್ನು ಗೌರವಿಸಲಾಯಿತು.

Advertisement

ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್‌ ಭೋಜ ಶೆಟ್ಟಿ, ಮಂಗಳೂರು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಯಕ್ಷಗಾನ ವಿದ್ವಾಂಸ ಪ್ರೊ| ಪ್ರಭಾಕರ ಜೋಶಿ, ನರಿಂಗಾನ ಕಂಬಳ ಸಮಿತಿ ಅಧ್ಯಕ್ಷ ಪ್ರಶಾಂತ್‌ ಕಾಜವ ಮುಖ್ಯ ಅತಿಥಿಗಳಾಗಿದ್ದರು.

ಸೇವಾ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿದರು. ಗೌರವಾಧ್ಯಕ್ಷ ಬಿ. ಸೀತಾರಾಮ ಶೆಟ್ಟಿ ಮಂಗಳೂರು ವಂದಿಸಿದರು. ಕೋಶಾಧಿಕಾರಿ ಸುನಾದ್‌ರಾಜ್‌ ಶೆಟ್ಟಿ ಬೊಂಡಾಲ, ಲಕ್ಷ್ಮೀನಾರಾಯಣ ರೈ ಹರೇಕಳ, ಸತೀಶ್‌ ಪಕ್ಕಳ ಸಮ್ಮಾನ ಪತ್ರ ವಾಚಿಸಿದರು. ಸುವರ್ಣ ಸಂಭ್ರಮ ಸಂಚಾಲಕ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ನಿರ್ವಹಿಸಿದರು. ಕಟೀಲು ಮೇಳದವರಿಂದ “ಶ್ರೀದೇವಿ ಲಲಿತೋಪಾಖ್ಯಾನ’ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next