Advertisement

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

02:07 AM Sep 20, 2024 | Team Udayavani |

ಮಂಗಳೂರು: ಶಕ್ತಿನಗರದ ನೀತಿ ನಗರದಲ್ಲಿ ಲೀಸ್‌ಗೆ ಪಡೆದ ಮನೆಯೊಂದರಲ್ಲಿ ವಾಸವಾಗಿದ್ದ ಲೆನ್ಸಿ ಜೆರಾಲ್ಡ್‌ ಪಿರೇರಾ (53) ನಾಪತ್ತೆಯಾಗಿದ್ದಾರೆ. ಹೊಟೇಲ್‌, ಬಾರ್‌, ಕ್ಯಾಟರಿಂಗ್‌ ಮೊದಲಾದ ಕೆಲಸ ಮಾಡುತ್ತಿದ್ದ ಅವರು, ಒಮ್ಮೊಮ್ಮೆ ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದರು. ಅವರು ವಾಸವಿದ್ದ ಮನೆಗೆ ಇತ್ತೀಚೆಗೆ ತಂಗಿ ಬಂದು ನೋಡಿದಾಗ ಲೆನ್ಸಿ ಮನೆಯಲ್ಲಿ ಇರಲಿಲ್ಲ.

Advertisement

ಪರಿಶೀಲಿಸಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಮೊಬೈಲ್‌, ಬ್ಯಾಗ್‌ ಮೊದಲಾದವುಗಳನ್ನು ಮನೆಯಲ್ಲೇ ಬಿಟ್ಟು ಹೋಗಿರುವುದು ಕಂಡು ಬಂದಿದೆ.

ನಾಪತ್ತೆಯಾದವರು 5.6 ಅಡಿ ಎತ್ತರ, ಗೋಧಿ ಬಣ್ಣ , ಕೋಲು ಮುಖ, ಸಪೂರ ಶರೀರ ಹೊಂದಿದ್ದಾರೆ. ತುಳು, ಕನ್ನಡ, ಕೊಂಕಣಿ ಭಾಷೆ ಬಲ್ಲವರಾಗಿದ್ದು, ಬಲ ಅಂಗೈನ ತುದಿಯಲ್ಲಿ ಮಚ್ಚೆ ಇದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next