Advertisement

ಶಕ್ತಿ ಯೋಜನೆ: 125 ಕೋಟಿ ರೂ. ಬಿಡುಗಡೆ

11:21 PM Aug 01, 2023 | Team Udayavani |

ಬೆಂಗಳೂರು: ಸರಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಮೊದಲ 20 ದಿನಗಳ (ಜೂ.11 ರಿಂದ ಜೂ. 30ರ ವರೆಗೆ) ಅನುದಾನ ಬಿಡುಗಡೆ ಮಾಡಿ ಸರಕಾರ ಮಂಗಳವಾರ ಆದೇಶ ಹೊರಡಿಸಿದ್ದು, ನಾಲ್ಕೂ ನಿಗಮಗಳಿಗೆ 125.48 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ.

Advertisement

ಒಟ್ಟಾರೆ 20 ದಿನಗಳಲ್ಲಿ 10.54 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಪ್ರಯಾಣ ಮೊತ್ತವು ಅಂದಾಜು 248.30 ಕೋಟಿ ರೂ. ಆಗುತ್ತದೆ. ಆದರೆ, ಈ ಪೈಕಿ ಮೊದಲ ಕಂತಿನಲ್ಲಿ ಸರಕಾರ ಅರ್ಧದಷ್ಟು ಅಂದರೆ, 125.48 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಉಳಿದ ಅಂದಾಜು 123 ಕೋಟಿ ರೂ. ಬಿಡುಗಡೆ ಆಗಬೇಕಿದೆ. ಇದಲ್ಲದೆ, ಜುಲೈ 1ರಿಂದ 31ರವರೆಗಿನ 426.58 ಕೋಟಿ ರೂ. ಕೂಡ ಬಾಕಿ ಇದೆ. ಈ ಮಧ್ಯೆ ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಬರುವ ಸುಮಾರು 35 ಸಾವಿರ ಸಾರಿಗೆ ನೌಕರರಿಗೆ ನಿಗಮವು ಎಂದಿನಂತೆ ಮಂಗಳವಾರವೇ ವೇತನ ಪಾವತಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next