ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಮುಂಜಾವಿನ ವೇಲೆ ಭೂಮಿಯಿಂದ ಮತ್ತೆ ಭಾರಿ ಸದ್ದು ಕೇಳಿ, ನಂತರ ಭೂಮಿ ಅಲುಗಾಡಿದ್ದರಿಂದ ಭಯಭೀತಿಯಿಂದ ಜನರು ಮನೆಯಿಂದ ಹೊರಗೋಡಿ ಬಂದಿದ್ದರು.
ಗಡಿಕೇಶ್ವಾರ, ತೇಗಲತಿಪ್ಪಿ, ಹಲಚೇರಾ, ಹೊಸಳ್ಳಿ, ಕುಪನೂರ, ಬೆನಕನಳ್ಳಿ, ಕೆರೋಳಿ, ರುದನೂರ, ರಾಯಕೋಡ, ಚಿಂತಪಳ್ಳಿ, ಭೂತಪೂರ, ಕೊರವಿ, ರಾಮನಗರ (ಕೊರವಿ ತಾಂಡಾ) ಗ್ರಾಮಗಳಲ್ಲಿ ಗುರುವಾರ ಮುಂಜಾನೆ 9:52 ನಿಮಿಷಕ್ಕೆ ಭೂಮಿಯಿಂದ ಭಾರಿ ಪ್ರಮಾಣದಲ್ಲಿ ಶಬ್ದ ಉಂಟಾಗಿ ನಂತರ ಲಘು ಭೂಕಂಪ ಆಗಿರುವುದರಿಂದ ಮನೆಯಲ್ಲಿದ್ದ ಜನರು ಜೀವದ ಭಯದಿಂದ ಸಣ್ಣ ಮಕ್ಕಳೊಂದಿಗೆ ಹೊರಗೋಡಿ ಬಂದಿದ್ದಾರೆ ಎಂದು ಗ್ರಾಮಸ್ಥರಾದ ಅರುಣಕುಮಾರ ರಂಗನೂರ, ರೇವಣಸಿದ್ಧಪ್ಪ ಅಣಕಲ್, ಸಂತೋಷ ಬಳಿ ತಿಳಿಸಿದ್ದಾರೆ.
ಗಡಿಕೇಶ್ವಾರ ಗ್ರಾಮದಲ್ಲಿ ಸಂಭವಿಸುತ್ತಿರುವ ಭೂಕಂಪನ ಅಧ್ಯಯನ ನಡೆಸುವುದಕ್ಕಾಗಿ ಹೈದ್ರಾಬಾದ್‌ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಅ.18ರಂದು ಸಿಸ್ಮೋ ಮೀಟರ್ ಗ್ರಾಪಂ ಕಚೇರಿ ಪಕ್ಕದಲ್ಲಿ ಅಳವಡಿಸಿದೆ. ಭೂಕಂಪ ಭಯದಿಂದ ಹೊರಗೆ ಬಂದ ಜನತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಆದರೆ ಮತ್ತೆ ಗುರುವಾರ ಮುಂಜಾನೆ ಭೂಮಿಯಿಂದ ಭಾರಿ ಶಬ್ದ ಉಂಟಾಗಿ, ಅಲುಗಾಡಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ ಎಂದು ಗ್ರಾಪಂ ಉಪಾಧ್ಯಕ್ಷ ಜಿಶಾನಅಲಿ ಪಟ್ಟೆದಾರ ತಿಳಿಸಿದ್ದಾರೆ.
ಇದನ್ನೂ ಓದಿ: ಜಗತ್ತಿನ ಶ್ರೀಮಂತ ಭಾಷೆ ಕನ್ನಡ
ಮನೆ ಅಂಗಳದಲ್ಲಿ ಶೆಡ್ ನಿರ್ಮಿಸಿ ಕೊಡಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದರೂ ಬೇಡಿಕೆ ಇನ್ನೂ ಈಡೇರಿಲ್ಲಗಡಿಕೇಶ್ವಾರದಲ್ಲಿ ಅಳವಡಿಸಿದ ರಿಕ್ಟರ್ ಮಾಪನದಲ್ಲಿ ಗುರುವಾರ ಉಂಟಾದ ಭೂಕಂಪದ ತೀವ್ರತೆ ಕುರಿತು ಹೈದ್ರಾಬಾದ್ ವಿಜ್ಞಾನಿಗಳು ಗ್ರಾಫ್ ನೀಡಿದ ನಂತರ ಮಾಹಿತಿ ತಿಳಿಸಲಾಗುವುದು.
-ಅಂಜುಮ್ ತಬ್ಸುಮ್, ತಹಶೀಲ್ದಾರ್