Advertisement

ಪಕ್ಷ ಸಂಘಟನೆಗೆ ಕೈ ಜೋಡಿಸಿ: ಶಾಸಕ ಆಚಾರ್‌

04:13 PM Jul 06, 2019 | Suhan S |

ಕುಕನೂರು: ಪಕ್ಷ ಸಂಘಟನೆಗೆ ಸದಸ್ಯತ್ವ ಅಭಿಯಾನ ಮೂಲಕ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು.

Advertisement

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸದಸ್ಯತ್ವ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿ ಅವರ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ಕಂಡು ರಾಷ್ಟ್ರದ ಜನತೆ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಿದ್ದಾರೆ. ಯುವಕರ ಮೋದಿ, ಮೋದಿ ಎಂಬ ಘೋಷಣೆ ದೇಶವನ್ನು ಅವನತಿಯತ್ತ ದೂಡುತ್ತಿದ್ದ ಕಾಂಗ್ರೆಸ್‌ನ ಬಾಯಿ ಮುಚ್ಚಿಸಿದೆ. ಚುನಾವಣೆ ಮುಗಿದರು ಸಹ ಬಿಜೆಪಿ ಸಂಘಟನೆಗೆ ಮುಂದಾಗಿದೆ. ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಬಿಜೆಪಿಯ ಸಿದ್ಧಾಂತ ಹಾಗೂ ರಾಷ್ಟ್ರಾಭಿವೃದ್ಧಿ ದಿಕ್ಸೂಚಿ ಮನೆ, ಮನಕ್ಕೆ ತಲುಪಿಸುವ ಕಾರ್ಯ ಆಗಬೇಕಿದೆ. ಇನ್ನೂ ಕೆಲವೇ ದಿನದಲ್ಲಿ ಭಾರತ ಆರ್ಥಿಕತೆಯಿಂದ ಸದೃಢವಾಗಿ ವಿಶ್ವದ ಹಿರಿಯಣ್ಣನ ಪಟ್ಟಕ್ಕೆ ಏರಲಿದೆ ಎಂದರು.

ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪ್ರಮೋದ ಜಿ. ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 23 ಕೋಟಿ(ಶೇ.38) ಮತ ಹಾಗೂ ಎನ್‌ಡಿಎ 28 ಕೋಟಿ (ಶೇ.48) ಮತ ಪಡೆದಿದೆ. 303 ಸ್ಥಾನ ಗೆದ್ದಿದ್ದರೂ ಸಹ ಬಿಜೆಪಿ ಸಂಘಟನೆಗೆ ಮುಂದಾಗಿದೆ. ಸಂಘಟನೆಯೆ ಪಕ್ಷದ ಬಲ. ಪ್ರತಿ ಮನೆಗೆ ತೆರಳಿ ಪಕ್ಷದ ಬಗ್ಗೆ ಅರಿವು ಮೂಡಿಸಿ, ಸದಸ್ಯರಾಗಲು ಕಾರ್ಯಕರ್ತರು ಮುಂದಾಗಬೇಕು ಎಂದರು.

ಜಿಲ್ಲಾ ಸದಸ್ಯತ್ವ ಅಭಿಯಾನದ ಸಂಚಾಲಕರಾದ ಅಮರೇಶ ಕುಳಗಿ, ಈರಪ್ಪ ಕುಡಗುಂಟಿ, ಯಲಬುರ್ಗಾ ಬಿಜೆಪಿ ಮಂಡಳ ಅಧ್ಯಕ್ಷ ರಥನ ದೇಸಾಯಿ, ಕಾರ್ಯದರ್ಶಿಗಳಾದ ಪ್ರಭು ಕಲಬುರ್ಗಿ, ಮಾರುತಿ ಗಾವರಾಳ, ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌, ಪ್ರಮುಖರಾದ ನವೀನ ಗುಳಗಣ್ಣವರ್‌, ಬಸಲಿಂಗಪ್ಪ ಭೂತೆ, ಶರಣಪ್ಪ ಬಣ್ಣದಬಾವಿ, ರಾಮಣ್ಣ ಭಜಂತ್ರಿ, ಎ.ಜೆ. ಭಾವಿಮನಿ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ಮಹಾಂತೇಶ ಹೂಗಾರ, ಮಂಜುನಾಥ ಗಟ್ಟೆಪ್ಪನವರ್‌, ಹಂಚ್ಯಾಳಪ್ಪ ತಳವಾರ, ಅರ್ಜುನರಾವ್‌ ಜಗತಾಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next