Advertisement

Shahpura: ಅಲ್ಪಸಂಖ್ಯಾಕ ಬಾಲಕರ ವಸತಿ ನಿಲಯದ ಊಟದಲ್ಲಿ ಹುಳು ಪತ್ತೆ

05:00 PM Jun 29, 2024 | Team Udayavani |

ಯಾದಗಿರಿ : ಶಹಾಪುರ ಅಲ್ಪಸಂಖ್ಯಾತರ ಹಾಸ್ಟೆಲ್ ಊಟದಲ್ಲಿ ಹುಳು‌ ಪತ್ತಯಾದ ಘಟನೆ ನಡೆದಿದೆ.

Advertisement

ಶಹಾಪುರ ನಗರದ ಅಲ್ಪಸಂಖ್ಯಾಕರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಮಧ್ಯಾಹ್ನದ ಊಟದಲ್ಲಿ ಬದನೆಕಾಯಿ ಪಲ್ಯದಲ್ಲಿ ಹುಳು ಪತ್ತೆಯಾಗಿದೆ.ಹುಳು ತುಂಬಿದ ಅಕ್ಕಿ, ಬೆಳೆ ಹಾಗೂ ತರಕಾರಿಗಳಿಂದ ಕೂಡಿದ ಊಟವನ್ನು‌ ನೀಡುತ್ತಾರೆ ಎಂದು ಮಕ್ಕಳು ವಾರ್ಡನ್ ವಿರುದ್ದ ಆರೋಪ‌ ಮಾಡಿದ್ದಾರೆ.

ದಿನ ನಿತ್ಯ ಇದೆ ರೀತಿ ನಡೆಯುತ್ತಿದ್ದು ಹಾಸ್ಟೆಲ್ ವಾರ್ಡನ್ ಹಾಗೂ ಪ್ರಾಂಶುಪಾಲರ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಕಳಪೆ ಆಹಾರ ಪೂರೈಸುತ್ತಿರುವ ವಸತಿ ಶಾಲೆ ವಾರ್ಡನ್ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಯಾದ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next