Advertisement

ಮುಸ್ಲಿಂ ಮತಗಳ ಮೇಲೆ ಚಿತ್ತ: ನಿತೀಶ್ ಸಂಪುಟಕ್ಕೆ ಬಿಜೆಪಿಯ ಶಹನವಾಜ್ ಸೇರ್ಪಡೆ ಸಾಧ್ಯತೆ

12:51 PM Jan 21, 2021 | Team Udayavani |

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸಚಿವ ಸಂಪುಟ ವಿಸ್ತರಣೆಗೆ ಸಿದ್ದವಾಗಿದ್ದು, ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿ ಸಿದ್ದವಾಗಿದ್ದು, ಬಿಜೆಪಿ ಕೂಡಾ ಹೆಸರನ್ನು ಅಂತಿಮಗೊಳಿಸಿ ನಿತೀಶ್ ಕುಮಾರ್ ಅವರಿಗೆ ಹಸ್ತಾಂತರಿಸಿರುವುದಾಗಿ ವರದಿ ತಿಳಿಸಿದೆ.

Advertisement

ಭಾರತೀಯ ಜನತಾ ಪಕ್ಷ ಹತ್ತು ಮಂದಿ ಶಾಸಕರು, ವಿಧಾನಪರಿಷತ್ ಸದಸ್ಯರ ಹೆಸರನ್ನು ನೀಡಿದ್ದು, ಇದರಲ್ಲಿ ಬಿಜೆಪಿ ಮುಖಂಡರಾದ ಶಹನವಾಜ್ ಹುಸೈನ್, ನಿತೀಶ್ ಮಿಶ್ರಾ, ಸಂಜಯ್ ಸರ್ವಾಗಿ, ಪ್ರಮೋದ್ ಕುಮಾರ್, ಕೃಷ್ಣ ಕುಮಾರ್ ರಿಷಿ, ಸಂಜಯ್ ಸಿಂಗ್, ಸಾಮ್ರಾಟ್ ಚೌಧರಿ, ರಾಮ್ ಪ್ರವೇಶ್ ರಾಯ್ ಸೇರ್ಪಡೆಯಾಗುವ ಸಾಧ್ಯತೆ ಇದ್ದಿರುವುದಾಗಿ ವಿವರಿಸಿದೆ.

ಬಿಹಾರದ ಸೀಮಾಂಚಲ್ ಮತ್ತು ಭಾಗಲ್ಪುರ್ ಪ್ರದೇಶಗಳ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಕ್ಷ ಸುಮಾರು ಎರಡು ದಶಕಗಳ ನಂತರ ಕೇಂದ್ರದಲ್ಲಿರುವ ಶಹನವಾಜ್ ಅವರನ್ನು ರಾಜ್ಯಕ್ಕೆ ಕರೆತರುವ ಸಿದ್ದತೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಶಹನವಾಜ್ ಹುಸೈನ್ ಭಾಗಲ್ಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಮೊದಲು ಮುಸ್ಲಿಂ ಬಾಹುಳ್ಯದ ಕಿಶನ್ ಗಂಜ್ ಕ್ಷೇತ್ರದಿಂದ ಹುಸೈನ್ ಸ್ಪರ್ಧಿಸಿದ್ದರು. ಆರ್ ಜೆಡಿ, ಕಾಂಗ್ರೆಸ್, ಹಾಗು ಎಐಎಂಐಎಂಗೆ ಸಡ್ಡು ಹೊಡೆಯಲು ಈ ಪ್ರದೇಶದಲ್ಲಿ ಹುಸೈನ್ ಅವರನ್ನು ಪ್ರಮುಖ ಮುಸ್ಲಿಂ ನಾಯಕನನ್ನಾಗಿ ಮಾಡಲು ಬಿಜೆಪಿ ಮುಂದಾಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next