Advertisement

ಭಾರತ-ಪಾಕ್‌ ವೈರತ್ವ ಅಂತ್ಯ, ಕ್ರಿಕೆಟ್‌ ಮೈತ್ರಿ ಆರಂಭ: ಆಫ್ರಿದಿ ಆಶಯ

04:16 PM May 04, 2017 | Team Udayavani |

ಹೊಸದಿಲ್ಲಿ : ಭಾರತ – ಪಾಕ್‌ ನಡುವಿನ ರಾಜಕೀಯ ಬಿಕ್ಕಟ್ಟು ಆದಷ್ಟು ಬೇಗನೆ ಶಮನವಾಗಬೇಕು; ಉಭಯ ದೇಶಗಳ ನಡುವೆ ಪುನಃ ಹಿಂದಿನ ಮೈತ್ರಿ ನೆಲೆಗೊಳ್ಳಬೇಕು ಮತ್ತು ಉಭಯ ದೇಶಗಳ ಕ್ರಿಕೆಟ್‌ ತಂಡಗಳು ಮತ್ತೆ ಅಂಗಣದಲ್ಲಿ ರೋಚಕವಾಗಿ  ಸೆಣಸುವಂತಾಗಬೇಕು ಎಂದು ಪಾಕ್‌ ಕ್ರಿಕೆಟಿಗ ಶಾಹೀದ್‌ ಆಫ್ರಿದಿ ಆಶಿಸಿದ್ದಾರೆ. 

Advertisement

ಆಫ್ರಿದಿ ದೃಷ್ಟಿಯಲ್ಲಿ ಭಾರತ – ಪಾಕ್‌ ಕ್ರಿಕೆಟಿಗರು ಕ್ರೀಡಾಂಗಣದ ಒಳಗೆ, ಹೊರಗೆ, ಎಲ್ಲೆಡೆ ಸಹೋದರರಂತೆ, ಸ್ನೇಹಿತರಂತೆ ಉತ್ತಮವಾಗಿ ಬೆರೆಯುತ್ತಾರೆ; ಉಭಯ ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟು ಏನೇ ಇದ್ದರೂ ಈ ಎರಡೂ ದೇಶಗಳ ಕ್ರಿಕೆಟಿಗರು, ಗೌತಮ್‌ ಗಂಭೀರ್‌ ಅವರನ್ನು ಹೊರತುಪಡಿಸಿ, ಅತ್ಯಂತ ಸ್ನೇಹಭಾವದಿಂದ ಕ್ರಿಕೆಟ್‌ ಆಡುತ್ತಾರೆ. ಆದುದರಿಂದ ಉಭಯ ದೇಶಗಳ ರಾಜಕೀಯ ಬಿಕ್ಕಟ್ಟು ಆದಷ್ಟು ಬೇಗನೆ ಕೊನೆಗೊಂಡು, ಶಾಂತಿ ಮರು ಸ್ಥಾಪನೆಗೊಂಡು, ಎರಡೂ ದೇಶಗಳ ಕ್ರಿಕೆಟ್‌ ಬಾಂಧವ್ಯ ಪುನರಾರಂಭವಾಗಬೇಕು; ಎರಡೂ ದೇಶಗಳು ಮತ್ತೆ ಕ್ರಿಕೆಟ್‌ ಅಂಗಣದಲ್ಲಿ ಒಂದಾಗಬೇಕು ಎಂದು ಆಫ್ರಿದಿ ಹಾರೈಸಿದ್ದಾರೆ. 

ಕ್ರಿಕೆಟ್‌ ವಲಯದಲ್ಲಿ ಲಾಲಾ ಎಂದೇ ಜನಪ್ರಿಯರಾಗಿರುವ ಆಫ್ರಿದಿ, ಈಚಿನ ವರ್ಷಗಳಲ್ಲಿ ತಾನು ಭಾರತ – ಪಾಕ್‌ ಕ್ರಿಕೆಟ್‌ ಪಂದ್ಯಗಳಿಂದ ವಂಚಿತರಾಗಿರುವ ಬಗ್ಗೆ ತುಂಬಾ ಬೇಸರಿಸಿಕೊಳ್ಳುತ್ತಾರೆ. ಅಂತೆಯೇ ಭಾರತ – ಪಾಕ್‌ ನಡುವಿನ ಕ್ರಿಕೆಟ್‌ ಬಾಂಧವ್ಯ ಮತ್ತೆ ಆರಂಭಗೊಳ್ಳಲೆಂದು ಮನಸೋ ಇಚ್ಛೆ ಹಾರೈಸುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next