Advertisement

ICC Ranking: ಅಗ್ರಸ್ಥಾನಕ್ಕೇರಿದ ಶಹೀನ್ ಶಾ ಅಫ್ರಿದಿ

03:21 PM Nov 02, 2023 | Team Udayavani |

ದುಬೈ: ನೂತನ ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ವೇಗದ ಬೌಲರ್‌ ಶಾಹೀನ್‌ ಶಾ ಅಫ್ರಿದಿ ಅಗ್ರಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಒಮ್ಮೆಲೆ ಏಳು ಸ್ಥಾನಗಳಷ್ಟು ಮೇಲಕ್ಕೆ ಜಿಗಿದಿರುವ ಅವರು, ಆಸ್ಟ್ರೇಲಿಯದ ಜೋಶ್‌ ಹೇಝಲ್‌ ವುಡ್‌ರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ.

Advertisement

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ನಲ್ಲಿ ಪಾಕಿಸ್ತಾನದ ಬೌಲಿಂಗ್‌, ಬ್ಯಾಟಿಂಗ್‌ ವಿಭಾಗ ಪೂರ್ಣವಾಗಿ ಹಳ್ಳ ಹಿಡಿದಿದೆ. ಇದ್ದಿದ್ದರಲ್ಲಿ ಶಾಹೀನ್‌ ಶಾ ಮಿಂಚುತ್ತಲೇ ಇದ್ದಾರೆ. ಮಂಗಳವಾರ ಬಾಂಗ್ಲಾ ವಿರುದ್ಧ ಪಾಕ್‌ ಗೆದ್ದ ಪಂದ್ಯದಲ್ಲಿ ಅವರು 3 ವಿಕೆಟ್‌ ಪಡೆದಿದ್ದರು.

ಭಾರತದ ವೇಗಿ ಮೊಹಮ್ಮದ್‌ ಸಿರಾಜ್‌ ಒಂದು ಸ್ಥಾನ ಕುಸಿದು, ಮೂರಕ್ಕಿಳಿದಿದ್ದಾರೆ. ಬ್ಯಾಟಿಂಗ್‌ ರ್‍ಯಾಂಕಿಂಗ್‌ ನಲ್ಲಾಗಲೀ, ತಂಡದ ರ್‍ಯಾಂಕಿಂಗ್‌ನಲ್ಲಾಗಲೀ ಮಹತ್ವದ ಬದಲಾವಣೆಗಳು ಸಂಭವಿಸಿಲ್ಲ. ಭಾರತ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಆಸ್ಟ್ರೇಲಿಯ ದ್ವಿತೀಯ ಸ್ಥಾನದಲ್ಲಿದೆ

Advertisement

Udayavani is now on Telegram. Click here to join our channel and stay updated with the latest news.

Next