Advertisement

ಪಿಎಂಎಲ್‌ಎನ್‌ ಪಕ್ಷದ ಮಧ್ಯಾವಧಿ ಅಧ್ಯಕ್ಷರಾಗಿ ಶಹಬಾಜ್‌ ಶರೀಫ್

04:19 PM Feb 27, 2018 | udayavani editorial |

ಲಾಹೋರ್‌ : ಪಾಕ್‌ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್‌ ಶರೀಫ್ ಅವರನ್ನು ಪಿಎಂಎಲ್‌-ಎನ್‌ ಪಕ್ಷದ ಮಧ್ಯಾವಧಿ ಅಧ್ಯಕ್ಷರನ್ನಾಗಿ ಇಂದು ಮಂಗಳವಾರ ಚುನಾಯಿಸಲಾಗಿದೆ. 

Advertisement

ಶಹಬಾಜ್‌ ಅವರ ಹಿರಿಯ ಸಹೋದರನಾಗಿರುವ ಪದಚ್ಯುತ ಮಾಜಿ ಪ್ರಧಾನಿ ನವಾಜ್‌ ಶರೀಫ್ ಅವರನ್ನು ಆಳುವ ಪಕ್ಷದ “ಕೈದ್‌’ ಆಗಿ ಜೀವಮಾನಾವಧಿಗೆ ನೇಮಿಸಲಾಗಿದೆ.

ಬ್ರಹ್ಮಾಂಡ ಭ್ರಷ್ಟಾಚಾರದ ಕಾರಣಕ್ಕಾಗಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಳಿಸಲಾಗಿದ್ದ 68ರ ಹರೆಯದ ನವಾಜ್‌ ಶರೀಫ್ ಅವರು ಪಕ್ಷಾಧ್ಯಕ್ಷರಾಗಿಯೂ ಮುಂದುವರಿಯಲು ಅನರ್ಹರೆಂದು ಈಚೆಗೆ ಪಾಕ್‌ ಸುಪ್ರೀಂ ಕೋರ್ಟ್‌ ಹೇಳಿತ್ತಲ್ಲದೆ, ಶರೀಫ್ ಪಕ್ಷದ ಅಧ್ಯಕ್ಷರಾಗಿ ತೆಗೆದುಕೊಂಡಿದ್ದ ಎಲ್ಲ ನಿರ್ಧಾರಗಳನ್ನು ಹೊಡೆದು ಹಾಕಿತ್ತು.  

66ರ ಹರೆಯದ ಶಹಬಾಜ್‌ ಅವರನ್ನು 45 ದಿನಗಳ ಅವಧಿಗೆ ಪಕ್ಷದ ಅಧ್ಯಕ್ಷರಾಗಿ ಶರೀಫ್ ಅವರ ಮಾಡೆಲ್‌ ಟೌನ್‌ ಲಾಹೋರ್‌ ನಿವಾಸದಲ್ಲಿ ನಡೆದಿದ್ದ ಕೇಂದ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚುನಾಯಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next